ರಾಯಚೂರು : ಸಾವಿರಾರು ಕೋಟಿ ರೂಪಾಯಿ ವ್ಯಯ ಮಾಡಿ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ಮಾಡಿದರೂ ತಾಂತ್ರಿಕ ತೊಂದರೆಯಿಂದ ಸ್ಥಗಿತಗೊಂಡಿದ್ದ ವೈಟಿಪಿಎಸ್ನಲ್ಲಿ ಇದೀಗ ವಿದ್ಯುತ್ ಉತ್ಪಾದನೆ ಪುನಾರಂಭವಾಗಿದೆ.
ಮತ್ತೆ ಕಾರ್ಯ ಆರಂಭಿಸಿದ ವೈಟಿಪಿಎಸ್ ವಿದ್ಯುತ್ ಕೇಂದ್ರ
ರಾಯಚೂರು ತಾಲೂಕಿನ ಯರಮರಸ್ ಬಳಿಯಿರುವ ವೈಟಿಪಿಎಸ್ನಲ್ಲಿ ತಾಂತ್ರಿಕ ಕಾರಣದಿಂದ ಹಲವು ದಿನಗಳಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಎದುರಾಗಿರುವ ಕೆಲವೊಂದು ತಾಂತ್ರಿಕ ದೋಷ ನಿವಾರಿಸಿ ವಿದ್ಯುತ್ ಉತ್ಪಾದನೆ ಕಾರ್ಯದಲ್ಲಿ ತೊಡಗಿದೆ.
ತಾಲೂಕಿನ ಯರಮರಸ್ ಬಳಿಯಿರುವ ವೈಟಿಪಿಎಸ್ನಲ್ಲಿ ತಾಂತ್ರಿಕ ಕಾರಣದಿಂದ ಹಲವು ದಿನಗಳಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಎದುರಾಗಿರುವ ಕೆಲವೊಂದು ತಾಂತ್ರಿಕ ದೋಷ ನಿವಾರಿಸಿ ವಿದ್ಯುತ್ ಉತ್ಪಾದನೆ ಕಾರ್ಯದಲ್ಲಿ ತೊಡಗಿದೆ.
ಎರಡು ವಿದ್ಯುತ್ ಉತ್ಪಾದನೆ ಘಟಕಗಳು ತಲಾ 800 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 1600 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಕೇಂದ್ರವಾಗಿದೆ. ಕೆಲ ದಿನಗಳಿಂದ ಕಾರ್ಯಾರಂಭ ಮಾಡಿರುವ 1 ಘಟಕದಿಂದ ಸದ್ಯ 383 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಮೂಲಕ ರಾಜ್ಯ ವಿದ್ಯುತ್ ಜಲಕ್ಕೆ ರವಾನಿಸಲಾಗುತ್ತಿದೆ.