ರಾಯಚೂರು : ತಾಲೂಕಿನ ಚಿಕ್ಕಸೂಗೂರು ಗ್ರಾಮದ ಬಳಿಯ ರೈಲ್ವೆ ಹಳಿ ಮೇಲೆ ವೈಟಿಪಿಎಸ್ ನೌಕರನ ಮೃತದೇಹ ಪತ್ತೆಯಾಗಿದೆ.
ಏಗನೂರು ಗ್ರಾಮದ ಗಣೇಶ ಕುರ್ಡಿ (26) ಮೃತ ನೌಕರ. ಈತ ವೈಟಿಪಿಎಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ನಿನ್ನೆ ಕೆಲಸಕ್ಕೆ ತೆರಳಿದ್ದನು. ಆದರೆ ಇಂದು ಬೆಳಗ್ಗೆ ಹಳಿಯ ಬಳಿ ಆತನ ಮೃತದೇಹ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.