ರಾಯಚೂರು: ಸಿಂಧನೂರು ಪಟ್ಟಣದ ಪ್ರವಾಸಿ ಮಂದಿರದ ಮುಖ್ಯರಸ್ತೆಯಲ್ಲಿ ಯುವಕನಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ನಗರದ ವಾರ್ಡ್ ನಂಬರ್ 25 ರ ಜನತಾ ಕಾಲೋನಿಯ ಹೈದರ್ ಹಸನ್ (19) ಗಾಯಗೊಂಡಿದ್ದಾನೆ. ಪ್ರವಾಸಿ ಮಂದಿರದ ಎದುರಿಗೆ ಬೈಕ್ ಸರ್ವಿಸ್ ಮಾಡಿಸಲು ಹೋದ ಈತನಿಗೆ ಅಲ್ಲೇ ಇದ್ದ ಅಪರಿಚಿತ ಯುವಕ ಏಕಾಏಕಿ ಧಾವಿಸಿ ಬಂದು ಬೆನ್ನಿಗೆ ಇರಿದಿದ್ದಾನೆ ಎಂದು ಹೇಳಲಾಗುತ್ತಿದೆ. ಗಾಯಾಳುವಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಯಚೂರು: ಅಂಗಡಿ ಮುಂದೆ ನಿಂತಿದ್ದ ಯುವಕನಿಗೆ ಚಾಕು ಇರಿತ - ಯುವಕನಿಗೆ ಚಾಕು ಇರಿತ
ಅಂಗಡಿ ಮುಂದೆ ನಿಂತಿದ್ದ ಯುವಕನಿಗೆ ಚಾಕು ಇರಿದ ಘಟನೆ ರಾಯಚೂರು ಜನರಲ್ಲಿ ಭೀತಿ ಉಂಟು ಮಾಡಿದೆ.
ಯುವಕನಿಗೆ ಚಾಕು ಇರಿತ