ರಾಯಚೂರು:ಮದುವೆಗೆ ಬಂದ ಇಬ್ಬರು ಯುವಕರು ಸ್ನಾನಕ್ಕೆ ತೆರಳಿದಾಗ ನೀರುಪಾಲಾಗಿರುವ ಘಟನೆ ಜಿಲ್ಲೆಯಲ್ಲಿ ಇಂದು ನಡೆದಿದೆ. ಮಸ್ಕಿ ತಾಲೂಕಿನ ಶಂಕರ್‌ನಗರ ಕ್ಯಾಂಪ್ ಬಳಿ ಈ ಘಟನೆ ಸಂಭವಿಸಿದೆ.
ರಾಯಚೂರು: ಮದುವೆಗೆ ಬಂದ ಇಬ್ಬರು ಯುವಕರು ಕಾಲುವೆಗೆ ಬಿದ್ದು ಸಾವು - ಅಗ್ನಿಶಾಮಕ ಸಿಬ್ಬಂದಿ
ಮದುವೆ ಹಿನ್ನೆಲೆಯಲ್ಲಿ ಇಬ್ಬರು ಯುವಕರು ದೀಪಾಲಂಕಾರಕ್ಕಾಗಿ ಬಂದಿದ್ದರು. ಶಂಕರ್ ಕ್ಯಾಂಪ್‌ನ ಬಳಿಯ 62ನೇ ಉಪಕಾಲುವೆಗೆ ಹರಿಯುವ ಕಾಲುವೆಗೆ ಸ್ನಾನ ಮಾಡುವುದಕ್ಕೆ ತೆರಳಿದ್ದರು. ಈ ವೇಳೆ ಕಾಲುವೆಯಲ್ಲಿ ಜಾರಿ ಬಿದ್ದು, ಯುವಕರು ನೀರುಪಾಲಾಗಿದ್ದಾರೆ.
![ರಾಯಚೂರು: ಮದುವೆಗೆ ಬಂದ ಇಬ್ಬರು ಯುವಕರು ಕಾಲುವೆಗೆ ಬಿದ್ದು ಸಾವು rcr](https://etvbharatimages.akamaized.net/etvbharat/prod-images/768-512-9358255-794-9358255-1603978720816.jpg)
rcr
ಹೈದರಾಬಾದ್ ಮೂಲದ ದಯಾ(18), ಶಿವಾ(19) ನೀರುಪಾಲಾಗಿರುವ ಯುವಕರೆಂದು ಗುರುತಿಸಲಾಗಿದೆ. ಮದುವೆ ಹಿನ್ನೆಲೆಯಲ್ಲಿ ಇಬ್ಬರು ಯುವಕರು ದೀಪಾಲಂಕಾರಕ್ಕಾಗಿ ಬಂದಿದ್ದರು. ಶಂಕರ್ ಕ್ಯಾಂಪ್‌ನ ಬಳಿಯ 62ನೇ ಉಪಕಾಲುವೆಗೆ ಹರಿಯುವ ಕಾಲುವೆಯಲ್ಲಿ ಸ್ನಾನ ಮಾಡಲು ತೆರಳಿದ್ದರು.
ಕಾಲುವೆಗೆ ಬಿದ್ದು ಸಾವು
ಈ ವೇಳೆ ಕಾಲುವೆಯಲ್ಲಿ ಜಾರಿ ಬಿದ್ದು, ಯುವಕರು ನೀರುಪಾಲಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಕವಿತಾಳ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜತೆಗೆ ಅಗ್ನಿಶಾಮಕ ಸಿಬ್ಬಂದಿ ಯುವಕರ ಶೋಧ ಕಾರ್ಯ ನಡೆಸಿದ್ದಾರೆ. ಕವಿತಾಳ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.