ಕರ್ನಾಟಕ

karnataka

ETV Bharat / state

ರಸ್ತೆಯಲ್ಲೇ ಯುವಕನ ಜೀವನ್ಮರಣದ ಹೋರಾಟ: ವಿಡಿಯೋ ಮಾಡುತ್ತಿದ್ದ ಜನ ನೆರವಿಗೆ ಧಾವಿಸಲಿಲ್ಲ! - ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲೇ ಒಂದು ತಾಸು ಒದ್ದಾಡಿದ ಯುವಕ

ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್‌ನಲ್ಲಿದ್ದ ಯುವಕ ಗಂಭೀರ ಗಾಯಗೊಂಡು ಕಾಲು ಮುರಿದು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ. ಇದನ್ನು ಕಂಡ ಜನರು ಯುವಕ ಒದ್ದಾಡುವುದನ್ನು ನೋಡುತ್ತಾ ನಿಂತಿದ್ದರೇ ಹೊರತು, ಯಾರೊಬ್ಬರೂ ನೆರವಿಗೆ ಧಾವಿಸುವ ಮನಸ್ಸು ಮಾಡಲಿಲ್ಲ. ಪರಿಣಾಮ ಸುಮಾರು ಒಂದು ಗಂಟೆಗಳ ಕಾಲ ಆತ ಜೀವನ್ಮರಣದ ಮಧ್ಯೆ ಹೋರಾಟ ನಡೆಸಬೇಕಾಯ್ತು.

ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲೇ ಒಂದು ತಾಸು ಒದ್ದಾಡಿದ ಯುವಕ
ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲೇ ಒಂದು ತಾಸು ಒದ್ದಾಡಿದ ಯುವಕ

By

Published : May 24, 2021, 10:05 AM IST

Updated : May 24, 2021, 10:40 AM IST

ರಾಯಚೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಯುವಕ ನರಳಾಡುತ್ತಿದ್ದರೂ ಮಾನವೀಯತೆ ಮರೆತ ಜನರು ವಿಡಿಯೋ ಮಾಡುತ್ತಾ ನೋಡುತ್ತಿದ್ದ ಅಮಾನವೀಯ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಬ್ಯಾಗವಾಟ್ ಗ್ರಾಮದಲ್ಲಿ ನಡೆದಿದೆ.

ಸುಮಾರು ಒಂದು ತಾಸು ಕಳೆದ ಬಳಿಕ ಘಟನೆಯ ಬಗ್ಗೆ ಮಾಹಿತಿ ಪಡೆದ ಕುಟುಂಬಸ್ಥರು ಸ್ಥಳಕ್ಕಾಗಮಿಸಿ ಯುವಕನನ್ನು ಆಸ್ಪತ್ರೆಗೆ ಕರೆದುಕೊಂಡು‌ ಹೋಗಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾನೆ.

ರಸ್ತೆಯಲ್ಲೇ ಯುವಕನ ಜೀವನ್ಮರಣದ ಹೋರಾಟ

ಮೃತ ಯುವಕನನ್ನು ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದ ಸಿದ್ದಾರ್ಥ ಎಂದು ಗುರುತಿಸಲಾಗಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Last Updated : May 24, 2021, 10:40 AM IST

ABOUT THE AUTHOR

...view details