ಕರ್ನಾಟಕ

karnataka

ETV Bharat / state

ಪ್ರೀತಿಸಿದ ಯುವತಿಯನ್ನು ನಿಶ್ಚಿತಾರ್ಥವಾದ ಯುವಕನ ಹತ್ಯೆ ಮಾಡಿದ ಪ್ರಿಯಕರ.. - murder news raichur

ವಿಷಯ ತಿಳಿದ ಸಿರವಾರ, ಹಟ್ಟಿ ಪೊಲೀಸರು ಹಾಗೂ ಲಿಂಗಸೂಗೂರು ಸಹಾಯಕ ಆಯುಕ್ತರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೊಲೆ ಮಾಡಿದ ಯುವಕನನ್ನು ಬಂಧಿಸಲಾಗಿದೆ. ಈ ವೇಳೆ ಮೆಹಬೂಬ್ ಹತ್ಯೆಗೆ ಯುವತಿಯೂ ಸಹ ಸಾಥ್ ನೀಡಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ..

raichur
ಮಹೆಬೂಬ್ ಕೊಲೆಯಾದ ಯುವಕ

By

Published : Nov 30, 2020, 1:01 PM IST

Updated : Nov 30, 2020, 3:28 PM IST

ರಾಯಚೂರು :ಪ್ರೀತಿಸಿದ ಯುವತಿಯನ್ನು ನಿಶ್ಚಿತಾರ್ಥವಾಗಿ ಮದುವೆಯಾಗಲು ಮುಂದಾದ ಯುವಕನನ್ನು ಪ್ರಿಯಕರ ತನ್ನ ಸ್ನೇಹಿತರ ಸಹಾಯದಿಂದ ಹತ್ಯೆ ಮಾಡಿರುವ ಘಟನೆ ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಸಿರವಾರ ಪಟ್ಟಣದ ನಿವಾಸಿ ಮಹೆಬೂಬ್(30) ಹತ್ಯೆಯಾದ ಯುವಕ. ಶಬ್ಬೀರ್ ಹಾಗೂ ಆತನ ಸ್ನೇಹಿತರಿಬ್ಬರ ಸಹಾಯದಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ಜಿಲ್ಲೆಯ ಲಿಂಗಸೂರು ತಾಲೂಕಿನ ರೋಡಲಬಂಡಾ ಗ್ರಾಮದ ಹೊರವಲಯದ ಹೊಲದಲ್ಲಿ ಹೂತು ಹಾಕಿದ್ದಾರೆ.

ಘಟನೆಯ ಹಿನ್ನೆಲೆ :ಸಿರವಾರ ಪಟ್ಟಣದ ಶ್ರೀ ಸನ್ನಿದಿ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್​ನಲ್ಲಿ ಅಟೆಂಡರ್​ ಆಗಿ ಮಹೆಬೂಬ್ ಕೆಲಸ ಮಾಡುತ್ತಿದ್ದ. ಈತನಿಗೆ ವಿವಾಹ ಮಾಡಲು ಮಹೆಬೂಬ್​ನ ಕುಟುಂಬದವರು ಲಿಂಗಸೂಗೂರು ತಾಲೂಕಿನ ರೋಡಲಬಂಡಾ ಗ್ರಾಮದ ಲಾಳೆಸಾಬ್ ಮಗಳು ಖಾಜಾಬೀಯೊಂದಿಗೆ ಕಳೆದ ಒಂದು ವರ್ಷದ ಹಿಂದೆ ಇಬ್ಬರ ನಿಶ್ಚಿತಾರ್ಥವಾಗಿತ್ತು.

ಈ ನಿಶ್ಚಿತಾರ್ಥದಲ್ಲಿ ಶಬ್ಬೀರ್ ಕಾರ್ಯಕ್ರಮದಲ್ಲಿ ಓಡಾಡಿಕೊಂಡು, ಮಹೆಬೂಬ್​ನನ್ನು ಪರಿಚಯ ಮಾಡಿಕೊಂಡಿದ್ದಾನೆ. ಇದರ ಸಲುಗೆಯಿಂದ ಎರಡು ಮೂರು ಬಾರಿ ಸಿರವಾರ ಪಟ್ಟಣಕ್ಕೆ ಬಂದು ಹೋಗಿದ್ದಾನೆ. ಆದ್ರೆ, 2020 ನ.16ರಂದು ಮೆಹಬೂಬ್ ಮನೆಯಿಂದ ಸಂಜೆ 6 ಗಂಟೆಗೆ ಹೊರಗಡೆ ಹೋಗಿ ಬರುವುದಾಗಿ ತೆರಳಿದ್ದಾನೆ. ಆದ್ರೆ, ರಾತ್ರಿಯಾದ್ರೂ ಮನೆಗೆ ವಾಪಸ್ ಆಗಿರಲಿಲ್ಲ.

ಹತ್ಯೆ ಮಾಡಿದ ಪ್ರಿಯಕರ

ಇದರಿಂದ ಗಾಬರಿಗೊಂಡ ಮೆಹಬೂಬ್​ನ ಕುಟುಂಬಸ್ಥರು ಎಲ್ಲಾ ಕಡೆ ಹುಡುಕಾಡಿ ಸಂಬಂಧಿಕರೊಂದಿಗೆ ವಿಚಾರಿಸಿದ್ರೆ, ಬಂದಿಲ್ಲ ಎನ್ನುವ ಸುದ್ದಿ ಕೇಳಿ 2020 ನ.18ರಂದು ಸಿರವಾರ ಪೊಲೀಸ್ ಠಾಣೆಗೆ ಮಗ ಕಾಣೆಯಾಗಿದ್ದಾನೆ ಹುಡುಕಿಕೊಡಿ ಎಂದು ಮೆಹಬೂಬ್​ನ ತಂದೆ ಹುಸೇನ್ ಸಾಬ್ ದೂರು ನೀಡಿದ್ದಾರೆ.

ಇದಾದ ಬಳಿಕ ಮೆಹಬೂಬ್ ತಂದೆ ಹುಸೇನ್ ಸಾಬ್ ತನ್ನ ಮಗನೊಂದಿಗೆ ನಿಶ್ಚಿತಾರ್ಥ ಮಾಡಿದ ರೋಡಲಬಂಡಾ ಗ್ರಾಮದ ಲಾಳೆಸಾಬ್(ಬೀಗರು) ಮನೆಗೆ ಹೋಗಿದ್ದಾನೆ. ಆಗ ತನ್ನ ಮಗನೊಂದಿಗೆ ನಿಶ್ಚಿತಾರ್ಥವಾದ ಖಾಜಾಬಿಗೆ ಹಾಗೂ ಶಬ್ಬೀರ್ ಇಬ್ಬರು ಪ್ರೀತಿಸುತ್ತಿರುವ ವಿಷಯ ತಿಳಿದು ಬಂದಿದೆ. ಈ ಬಗ್ಗೆ ಸಿರವಾರ ಠಾಣೆಗೆ ವಿಷಯವನ್ನು ಗಮನಕ್ಕೆ ತಂದಿದ್ದಾರೆ.

ಈ ಮಾಹಿತಿ ಮೇರೆಗೆ ತನಿಖೆ ನಡೆಸಿದಾಗ ಶಬ್ಬೀರ್, ಖಾಜಾಬಿಯನ್ನು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದು, ಹೇಗಾದ್ರೂ ಮಾಡಿ ಮದುವೆಯಾಗಬೇಕು ಎಂದು ನಿರ್ಧರಿಸಿದ್ರು. ಈ ನಡುವೆ ಖಾಜಾಬಿಯ ಕುಟುಂಬದವರು ಮಹೆಬೂಬ್​ನೊಂದಿಗೆ ನಿಶ್ಚಿತಾರ್ಥ ಮಾಡಿರುವುದರಿಂದ ಈತನನ್ನು ಕೊಲೆ ಮಾಡಿಯಾದ್ರೂ ಖಾಜಾಬಿಯನ್ನು ಮದುವೆಯಾಗಬೇಕು ಎನ್ನುವುದನ್ನು ಶಬ್ಬೀರ್ ನಿರ್ಧರಿಸಿದ್ದಾನೆ.

ಹೀಗಾಗಿ 2020 ನ.16ರಂದು ಸಿರವಾರ ಪಟ್ಟಣಕ್ಕೆ ಬಂದ ಶಬ್ಬೀರ್, ಪಟ್ಟಣದ ರೆಡಿಯೋ ಅಂಗಡಿಯ ಬಳಿ ಕುಳಿತಿದ್ದ ಮೆಹಬೂಬ್​ನನ್ನು ಒತ್ತಾಯ ಪೂರ್ವಕವಾಗಿ ಕವಿತಾಳ ಪಟ್ಟಣಕ್ಕೆ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಗೆ ಶಬ್ಬೀರ್ ಸ್ನೇಹಿತರಾದ ಚಂದ್ರು, ಫಯಾಜ್​ನನ್ನು ಕರೆಸಿಕೊಂಡು ಮದ್ಯಪಾನದ ಪಾರ್ಟಿ ಮಾಡಿದ್ದಾರೆ.

ಇದಾದ ಬಳಿಕ ಶಬ್ಬೀರ್, ಚಂದ್ರು, ಫಯಾಜ್ ಕೊಲೆ ಮಾಡುವ ಸ್ಕೆಚ್​ ಹಾಕಿ ಕವಿತಾಳ ಪಟ್ಟಣದಿಂದ ರೋಡಲಬಂಡಾ ಗ್ರಾಮಕ್ಕೆ ಕರೆದುಕೊಂಡು ಹೋಗಿ ಅನ್ವರಿ ಸೀಮಾಂತರದಲ್ಲಿ ಬರುವ ಹೊಲದಲ್ಲಿ ಟವಲ್ ನಿಂದ ಉಸಿರುಕಟ್ಟಿ ಕೊಲೆ ಮಾಡಿ ಹೂತು ಹಾಕಿರುವುದಾಗಿ ತಿಳಿದು ಬಂದಿದೆ.

ವಿಷಯ ತಿಳಿದ ಸಿರವಾರ, ಹಟ್ಟಿ ಪೊಲೀಸರು ಹಾಗೂ ಲಿಂಗಸೂಗೂರು ಸಹಾಯಕ ಆಯುಕ್ತರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೊಲೆ ಮಾಡಿದ ಯುವಕನನ್ನು ಬಂಧಿಸಲಾಗಿದೆ. ಈ ವೇಳೆ ಮೆಹಬೂಬ್ ಹತ್ಯೆಗೆ ಯುವತಿಯೂ ಸಹ ಸಾಥ್ ನೀಡಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸ್ನೇಹಿತರಾದ ಚಂದ್ರು, ಫಯಾಜ್ ತಪ್ಪಿಸಿಕೊಂಡಿದ್ದು ಇಬ್ಬರನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಇತ್ತ ಮಗನನ್ನು ಕಳೆದುಕೊಂಡ ಮೆಹಬೂಬ್​ನ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Nov 30, 2020, 3:28 PM IST

ABOUT THE AUTHOR

...view details