ರಾಯಚೂರು:ಅಂಗಡಿ ಪೇಂಟ್ ಮಾಡಲು ತೆರಳಿದಾಗ ವಿದ್ಯುತ್ ತಂತಿ ತಗುಲಿ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿರವಾರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ನಡೆದಿದೆ.
ವಿದ್ಯುತ್ ತಂತಿ ತಗುಲಿ ಪೇಂಟಿಂಗ್ ಮಾಡಲು ತೆರಳಿದ್ದ ಯುವಕ ಸಾವು - young man died in raichur
ಅಂಗಡಿ ಪೇಂಟ್ ಮಾಡಲು ತೆರಳಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿರವಾರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ನಡೆದಿದೆ.
ವಿದ್ಯುತ್ ತಂತಿ ತಗುಲಿ ಯುವಕ ಸಾವು
ಗಲಗ ಶೇಕ್ ಮಹ್ಮದ್ (20) ಅಲಿಯಾಸ್ ನಿಸಾರ್ ಮೃತ ವ್ಯಕ್ತಿ. ದೀಪಾವಳಿ ಹಬ್ಬದ ನಿಮಿತ್ತ ಕೃಷ್ಣಾಜಿರಾವ್ ಎಂಬುವರು ತಮ್ಮ ಅಂಗಡಿಗೆ ಪೇಂಟ್ ಮಾಡಲು ಶೇಕ್ ಮಹ್ಮದ್ಗೆ ಹೇಳಿದ್ರು. ಹೀಗಾಗಿ ಇಂದು ಬೆಳಗ್ಗೆ ಶೇಕ್ ಮಹ್ಮದ್ ಪೇಂಟ್ ಮಾಡಲು ತೆರಳಿದ್ದಾಗ ಅಂಗಡಿ ಬಳಿ ಹಾದು ಹೋಗಿರುವ 11 ಕೆ.ವಿ. ಸಾಮರ್ಥ್ಯವುಳ್ಳ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಸಿರವಾರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.