ರಾಯಚೂರು:ಮನೆಯೊಂದರಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಗಿಲ್ಲೆಸೂಗೂರು ಕ್ಯಾಂಪ್‌ನಲ್ಲಿ ಜರುಗಿದೆ. ನರಸಿಂಹಲು ತಿಮ್ಮಪ್ಪ(26) ಎಂಬಾತ ಕೊಲೆಯಾದ ವ್ಯಕ್ತಿ.
ಮನೆಯಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ನರಸಿಂಹಲುನನ್ನು ಕಂಡು ಜನರು ಬಿಚ್ಚಿಬಿದ್ದಿದ್ದಾರೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮಧ್ಯಾಹ್ನದ ವೇಳೆ ಹತ್ಯೆ ಮಾಡಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.