ಕರ್ನಾಟಕ

karnataka

ETV Bharat / state

ಪ್ರೀತಿಸಿ ಮದುವೆಯಾಗಿ ಕುಟುಂಬಸ್ಥರಿಂದ ದೂರವಾದ ಕೊರಗು: ಮಹಿಳೆ ನೇಣಿಗೆ ಶರಣು - ರಾಯಚೂರಿನಲ್ಲಿ ಮಹಿಳೆ ಆತ್ಮಹತ್ಯೆ

ಪ್ರೀತಿಸಿ ಮದುವೆಯಾದ ಮಹಿಳೆಯೋರ್ವಳು ಪೋಷಕರಿಂದ ದೂರವಾಗಿರುವ ಕೊರಗಿನಿಂದ ಆತ್ಮಹತ್ಯೆಗೆ ಶರಣಾಗಿದ್ದಾಳೆ.

Women suicide in Raichur
Women suicide in Raichur

By

Published : Jan 27, 2021, 10:47 PM IST

ರಾಯಚೂರು:ಪ್ರೀತಿಸಿ ಮದುವೆಯಾಗಿ, ಕುಟುಂಬಸ್ಥರಿಂದ ದೂರವಾದ ಕೊರಗಿನಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೋರ್ವಳು ನೇಣಿಗೆ ಶರಣಾಗಿದ್ದಾಳೆ. ರಾಯಚೂರಿನ ಲಿಂಗಸುಗೂರು ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಬೈಪಾಸ್​ ರಸ್ತೆಯ ಬಾಡಿಗೆ ಮನೆಯ ಬೆಡ್​ ರೂಂನಲ್ಲಿನ ಫ್ಯಾನ್​ಗೆ ಮಂಗಳವಾರ ತಡರಾತ್ರಿ ನೇಣು ಹಾಕಿಕೊಂಡಿದ್ದಾಳೆ ಎನ್ನಲಾಗಿದೆ.

ಆತ್ಮಹತ್ಯೆಗೆ ಶರಣಾದ ಮಹಿಳೆ

ನೇಣಿಗೆ ಶರಣಾದ ಮಹಿಳೆಯನ್ನು ಬೆಂಗಳೂರು ಮೂಲದ ವಿಜಯಲಕ್ಷ್ಮಿ ಶಿವಶರಣ (34) ಎಂದು ಗುರುತಿಸಲಾಗಿದೆ. 2018ರಲ್ಲಿ ಶಿವಶರಣ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆಗಿನಿಂದಲೂ ಸಂಬಂಧಿಕರನ್ನು ದೂರ ಮಾಡಿಕೊಂಡೆ ಎಂದು ಸ್ನೇಹಿತರ ಮುಂದೆ ಹೇಳಿಕೊಳ್ಳುತ್ತಿದ್ದಳಂತೆ. ಇದೀಗ ಅದೇ ಕೊರಗಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.

ಈ ಸಾವಿನ ಹಿಂದೆ ಯಾವುದೇ ವ್ಯಕ್ತಿಯ ಕೈವಾಡವಿಲ್ಲ ಎಂದು ಮೃತ ಮಹಿಳೆ ತಂದೆ ವಾಸುದೇವರಾವ್ ಈಗಾಗಲೇ ಮಾಹಿತಿ ನೀಡಿದ್ದು, ಇದೊಂದು ಅಸ್ವಾಭಾವಿಕ ಸಾವು ಎಂದು ಪಿಎಸ್​ಐ ಪ್ರಕಾಶರೆಡ್ಡಿ ಡಂಬಳ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ABOUT THE AUTHOR

...view details