ರಾಯಚೂರು: ಗಂಡನ ಕಿರುಕುಳ ತಾಳಲಾರದೆ ಗೃಹಿಣಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕೋಟ್ ತಲಾರ್ ಬಡಾವಣೆಯಲ್ಲಿ ನಡೆದಿದೆ.
ಗಂಡನ ಕಿರುಕುಳ ತಾಳಲಾರದೆ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ.. - ಗಂಡನ ಕಿರುಕುಳ
ಗಂಡನ ಕಿರುಕುಳ ತಾಳಲಾರದೆ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಗಂಡ ಹಾಗೂ ಆತನ ಕುಟುಂಬಸ್ಥರೇ ಕಾರಣ ಎಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದಾರೆ.
![ಗಂಡನ ಕಿರುಕುಳ ತಾಳಲಾರದೆ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ..](https://etvbharatimages.akamaized.net/etvbharat/prod-images/768-512-4328310-thumbnail-3x2-rcr.jpg)
ನೇಣು ಬಿಗಿದು ಆತ್ಮಹತ್ಯೆ
ಸೈಯದ್ ಅಮೀನಾ(21) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ. ಪತಿ ಮಾಸೂಮ್ ಪೀರ್ ಎಂಬಾತ ಎರಡು ವಿವಾಹವಾಗಿದ್ದ. ಈತನಿಗೆ ಮೃತ ಸೈಯದ್ ಅಮೀನಾ ಎರಡನೇ ಪತ್ನಿಯಾಗಿದ್ದರು. ಪತಿ ಹಾಗೂ ಕುಟುಂಬಸ್ಥರು ಸುಖಾಸುಮ್ಮನೆ ಕಿರುಕುಳ ನೀಡುತ್ತಿದ್ದರಂತೆ. ಇದರಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸೈಯದ್ ಅಮೀನಾ ಪೋಷಕರು ಆರೋಪಿಸಿದ್ದಾರೆ.
ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು..
ಘಟನಾ ಸ್ಥಳಕ್ಕೆ ಸದರಬಜಾರ್ ಠಾಣೆ ಹಾಗೂ ಮಹಿಳಾ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.