ಕರ್ನಾಟಕ

karnataka

ETV Bharat / state

ಕೈಕೊಟ್ಮೇಲೆ ಕೊಲೆ? ಕಟ್ಕೊಂಡ ಗಂಡ ಹೆತ್ತ ಮಕ್ಕಳನ್ನೇ ಬಿಟ್ಹೋದಳು.. ಲವರ್‌ನ ಮದುವೆಯಾಗಿ ಹೆಣವಾದಳು.. - Kannada news

ಪದ್ಮಾವತಿ ಮೊದಲು ವೆಂಕೋಬ ಎಂಬುವನೊಂದಿಗೆ ವಿವಾಹವಾಗಿ ಎರಡು ಮಕ್ಕಳು ಆಗಿದ್ದವು. ಆದರೆ, ವಿವಾಹವಾಗಿದ್ರೂ ಅನ್ಯಕೋಮಿನ ಯುವಕನನ್ನು ಪ್ರೀತಿಸಿ, ಪತಿ ಮತ್ತು ಮಕ್ಕಳನ್ನು ಬಿಟ್ಟು ಪ್ರೀತಿಸಿದವನೊಂದಿಗೆ ಮದುವೆ ಮಾಡಿಕೊಂಡು ಪಟ್ಟಣವನ್ನ ಬಿಟ್ಟು ಹೋಗಿದ್ದಳು.

ಮೊದಲನೆ ಪತ್ನಿಗೆ ಬಾಯ್ ಹೇಳಿ ಪ್ರೀತಿಸಿ ಮದುವೆಯಾಗಿ ಹೆಣವಾದ ಗೃಹಿಣಿ

By

Published : Jun 22, 2019, 9:59 AM IST

ರಾಯಚೂರು : ರಾಯಚೂರಿನ ಹಟ್ಟಿ ಪಟ್ಟಣದಲ್ಲಿ ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದ ಕಾಕಾನಗರ ಬಡವಣೆಯಲ್ಲಿ ಮನೆಯೊಂದರಲ್ಲಿ ಈ ಘಟನೆ ಜರುಗಿದೆ. ಪದ್ಮಾವತಿ ಸಾವನ್ನಪ್ಪಿರುವ ಗೃಹಿಣಿ, ಕೊಲೆ ಶಂಕೆ ವ್ಯಕ್ತಪಡಿಸಿ ಮೃತಳ ತಾಯಿ ದೂರು ದಾಖಲಿಸಿದ್ದಾರೆ.

ಪದ್ಮಾವತಿ ಮೊದಲು ವೆಂಕೋಬ ಎಂಬುವನೊಂದಿಗೆ ವಿವಾಹವಾಗಿದ್ದಳು. ಅವರಿಗೆ ಎರಡು ಮಕ್ಕಳೂ ಆಗಿದ್ದವು. ಆದರೆ, ವಿವಾಹವಾಗಿದ್ರೂ ಅನ್ಯಕೋಮಿನ ಯುವಕನನ್ನು ಪ್ರೀತಿಸಿ, ಪತಿ ಮತ್ತು ಮಕ್ಕಳನ್ನು ಬಿಟ್ಟು ಪ್ರೀತಿಸಿದವನೊಂದಿಗೆ ಮದುವೆ ಮಾಡಿಕೊಂಡು ಪಟ್ಟಣವನ್ನ ಬಿಟ್ಟು ಹೋಗಿದ್ಲು.

ಇತ್ತೀಚೆಗೆ ಪಟ್ಟಣಕ್ಕೆ ಆಗಮಿಸಿ, ಪ್ರೀತಿಸಿದ ಯುವಕನ ಮನೆಯಲ್ಲಿ ವಾಸವಾಗಿದ್ರು. ಆದರೆ, ನಿನ್ನೆ ಪದ್ಮಾವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಇದು ಆತ್ಮಹತ್ಯೆಯಲ್ಲ, ಪ್ರೀತಿಸಿದ ಯುವಕ ಮತ್ತು ಇತರರು ಕೂಡಿ ಮಾಡಿದ ಕೊಲೆ ಎಂದು ಪದ್ಮಾವತಿ ಪೋಷಕರು ಆರೋಪಿಸಿದ್ದಾರೆ.

ABOUT THE AUTHOR

...view details