ಕರ್ನಾಟಕ

karnataka

ETV Bharat / state

ಸಂತೆ ಮಾಡಲು ಬಂದ ಮಹಿಳೆ ಲಾರಿಗೆ ಸಿಲುಕಿ ಸಾವು - ರಾಯಚೂರಿನಲ್ಲಿ ಲಾರಿ ಅಪಘಾತ

ಸಂತೆ ಮಾಡಲು ಬಂದ ಮಹಿಳೆ ಲಾರಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಯಚೂರಿನ ಶಕ್ತಿನಗರದಲ್ಲಿ ನಡೆದಿದೆ.

ಲಾರಿ ಗಾಲಿ ಸಿಲುಕಿ ಸಾವು

By

Published : Oct 13, 2019, 7:53 PM IST

ರಾಯಚೂರು: ಸಂತೆ ಮಾಡಲು ಬಂದ ಮಹಿಳೆ ಲಾರಿ ಗಾಲಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಯಚೂರಿನ ಶಕ್ತಿನಗರದಲ್ಲಿ ನಡೆದಿದೆ.

ಶಕ್ತಿನಗರದ 1ನೇ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದ್ದು, ಕಡ್ಲೂರು ಗ್ರಾಮದ ಸುಧಾ(25) ಮೃತ ಮಹಿಳೆಯೆಂದು ತಿಳಿದು ಬಂದಿದೆ. ಶಕ್ತಿನಗರದ ಹೈವೇ ಬಳಿ ಸಂತೆ ಮಾಡಲು ಬಂದಿದ್ದ ಸುಧಾ ಲಾರಿ ಗಾಲಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಶಕ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ ಗಾಲಿಗೆ ಸಿಲುಕಿ ಸಾವು

ಇನ್ನು ಈ‌ ರಸ್ತೆ ರಾಯಚೂರಿನಿಂದ ಹೈದರಾಬಾದ್​​ಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ನಿತ್ಯ ನೂರಾರು ವಾಹನಗಳು ಸಂಚಾರಿಸುತ್ತವೆ. ಇಂತಹ ವಾಹನ ದಟ್ಟಣೆ ಇರುವ ರಸ್ತೆಯ ಪಕ್ಕದಲ್ಲಿಯೇ ಸಂತೆ ನಡೆಯುತ್ತಿದ್ದು, ಇದು ಇಂತಹ‌ ದುರ್ಘಟನೆಗೆ ಕಾರಣವೆಂದು‌ ಸ್ಥಳೀಯರು ಆರೋಪಿಸಿದ್ದಾರೆ.

ABOUT THE AUTHOR

...view details