ಕರ್ನಾಟಕ

karnataka

ETV Bharat / state

ಲಿಂಗಸುಗೂರಲ್ಲಿ ಸೋಂಕಿತ ವ್ಯಕ್ತಿಯ ತಾಯಿ ಸಾವು: ಮೂರು ಪ್ರಕರಣ ಪತ್ತೆ

ಲಿಂಗಸುಗೂರು ತಾಲೂಕಿನಲ್ಲಿ ಇಂದು ಕೊರೊನಾ ಸೋಂಕಿನ ತಾಯಿ ಮೃತಪಟ್ಟಿದ್ದು, ಮೂರು ಜನರಲ್ಲಿ ಸೋಂಕು ದೃಢಪಟ್ಟಿದೆ.

three corona cases found in Lingasugur
ಲಿಂಗಸೂರಿನಲ್ಲಿ ಸೋಂಕಿತ ವ್ಯಕ್ತಿಯ ತಾಯಿ ಸಾವು

By

Published : Jul 12, 2020, 5:27 PM IST

ಲಿಂಗಸುಗೂರು(ರಾಯಚೂರು): ಇಂದು ತಾಲೂಕಿನಲ್ಲಿ ಕೊರೊನಾ ಸೋಂಕಿತನ ವ್ಯಕ್ತಿಯ ತಾಯಿ ಮೃತಪಟ್ಟಿದ್ದು, ಮೂರು ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ.

ತಾಲೂಕಿನ ಹಿರೇನಗನೂರಿನ ಕೋವಿಡ್‌ ಪೀಡಿತನ ತಾಯಿ ಮೃತಪಟ್ಟಿದ್ದು, ಘಟನೆ ತಾಲೂಕು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಮಹಿಳೆ ಹೃದಯಾಘಾತ ಅಥವಾ ಕೋವಿಡ್​​ನಿಂದ ಸಾವನ್ನಪ್ಪಿದ್ದಾರೋ ಎಂಬುದರ ಕುರಿತು ತಿಳಿಯಲು ಅಧಿಕಾರಿಗಳು ಮೃತಳ ಗಂಟಲು ದ್ರವವನ್ನು ಸಂಗ್ರಹಿಸಿದ್ದಾರೆ.

ಜಿಲ್ಲಾಡಳಿತದ ನಿರ್ದೇಶನ ಮೇರೆಗೆ ಕೋವಿಡ್ ನಿಯಮ ಆಧರಿಸಿ ಮೃತಳ ಅಂತ್ಯಕ್ರಿಯೆ ನಡೆಸಿದ್ದು, ಸಂಬಂಧಿಕರು ಪಿಪಿಇ ಕಿಟ್ ಧರಿಸಿದ್ದರು.

ಮೂವರಲ್ಲಿ ಸೋಂಕು ಪತ್ತೆ:

ಕೊಪ್ಪಳ ಜಿಲ್ಲೆ ಕಾರಟಗಿಗೆ ಮದುವೆಗೆ ಹೋಗಿದ್ದ ಲಿಂಗಸುಗೂರು ಪಟ್ಟಣದ ವ್ಯಕ್ತಿ ರೋಗಿ ನಂಬರ್​​ (716), ಜಾಗೂಹಟ್ಟಿ ಗ್ರಾಮದ ಮುದಗಲ್ಲ ಸಮುದಾಯ ಆಸ್ಪತ್ರೆಯಲ್ಲಿ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ರೋಗಿ ನಂಬರ್ (717) ಮತ್ತು ಮುದಗಲ್ಲ ನೀರದೊಡ್ಡಿ ಪ್ರದೇಶದ ವ್ಯಕ್ತಿ ರೋಗಿ ನಂಬರ್​ (715) ಕೋವಿಡ್ ದೃಢಪಟ್ಟಿದ್ದು, ಇವರನ್ನು ರಾಯಚೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ABOUT THE AUTHOR

...view details