ರಾಯಚೂರು: ಆರ್‌ಎಂಪಿ ಡಾಕ್ಟರ್ ನೀಡಿರುವ ಇಂಜೆಕ್ಷನ್ನಿಂದ ಮಹಿಳೆ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ.
ಪ್ರಾಣ ತೆಗೆದ ಹಲ್ಲು ನೋವಿನ ಇಂಜೆಕ್ಷನ್... ಆರ್ ಎಂಪಿ ವೈದ್ಯನ ವಿರುದ್ಧ ಮನೆಯವರ ಆರೋಪ - ಆರ್‌ಎಂಪಿ ಡಾಕ್ಟರ್ ಇಂಜೆಕ್ಷನ್ನಿಂದ ಮಹಿಳೆ ಸಾವು ಸುದ್ದಿ
ಆರ್‌ಎಂಪಿ ಡಾಕ್ಟರ್ ನೀಡಿರುವ ಇಂಜೆಕ್ಷನ್ನಿಂದ ಮಹಿಳೆ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ.
![ಪ್ರಾಣ ತೆಗೆದ ಹಲ್ಲು ನೋವಿನ ಇಂಜೆಕ್ಷನ್... ಆರ್ ಎಂಪಿ ವೈದ್ಯನ ವಿರುದ್ಧ ಮನೆಯವರ ಆರೋಪ ಆರ್‌ಎಂಪಿ ಡಾಕ್ಟರ್ ಇಂಜೆಕ್ಷನ್ನಿಂದ ಮಹಿಳೆ ಸಾವು,Women dead by RMP doctor injection](https://etvbharatimages.akamaized.net/etvbharat/prod-images/768-512-5400062-thumbnail-3x2-rcrdeath.jpg)
ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕಸಬಾ ಗ್ರಾಮದ ನಿವಾಸಿ ಸುವರ್ಣಮ್ಮ (48) ಮೃತ ವೃದ್ದೆ. ಸುವರ್ಣಮ್ಮ ನಿನ್ನೆ ರಾತ್ರಿಯಿಂದ ಹಲ್ಲು ನೋವುನಿಂದ ಬಳಲುತ್ತಿದ್ದರು. ಈ ವೇಳೆ ಕಳ್ಳಿ ಲಿಂಗಸೂಗೂರು ಗ್ರಾಮದಲ್ಲಿ ಆರ್‌ಎಂಪಿ ಡಾಕ್ಟರ್ ಎಂದು ಹೇಳಲಾಗುತ್ತಿರುವ ವೈದ್ಯರ ಬಳಿ ತೆರಳಿದ್ದರು. ಆಗ ಡಾಕ್ಟರ್ ಇಂಜೆಕ್ಷನ್ ನೀಡಿದ್ದಾರೆ. ಇದರಿಂದ ಮಹಿಳೆ ಅಸ್ವಸ್ಥಗೊಂಡಿದ್ದಾರೆ.
ಗಾಬರಿಯಾದ ಮಕ್ಕಳು ಕೂಡಲೇ ಲಿಂಗಸೂಗೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದ್ರೆ ಆಸ್ಪತ್ರೆ ತಲಪುವಷ್ಟರಲ್ಲೇ ಸುವರ್ಣಮ್ಮ ಮೃತಪಟ್ಟಿದ್ದಾರೆ ಎಂದು ಮೃತರ ಮಕ್ಕಳು ದೂರಿದ್ದಾರೆ. ಲಿಂಗಸೂಗೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.