ರಾಯಚೂರು: ತುಂಗಭದ್ರಾ ಕಾಲುವೆಯಲ್ಲಿ ನಗ್ನ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.
ತುಂಗಭದ್ರಾ ಕಾಲುವೆಯಲ್ಲಿ ಅಪರಿಚಿತ ಮಹಿಳೆಯ ಬೆತ್ತಲಾದ ಶವ ಪತ್ತೆ - ಸಿಂಧನೂರು ಬಳಿ ತುಂಗಭದ್ರಾ ಕಾಲುವೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಜವಳಗೇರಾ ಗ್ರಾಮದ ಬಳಿಯ ತುಂಗಭದ್ರಾ ಕಾಲುವೆಯಲ್ಲಿ ಅಪರಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.
![ತುಂಗಭದ್ರಾ ಕಾಲುವೆಯಲ್ಲಿ ಅಪರಿಚಿತ ಮಹಿಳೆಯ ಬೆತ್ತಲಾದ ಶವ ಪತ್ತೆ Women Dead Body Found in Thungabadra Canel](https://etvbharatimages.akamaized.net/etvbharat/prod-images/768-512-6288296-thumbnail-3x2-hrs.jpg)
ಅಪರಿಚಿತ ಮಹಿಳೆಯ ಶವ ಪತ್ತೆ
ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದ ಬಳಿಯ ತುಂಗಭದ್ರಾ ಉಪ ಕಾಲುವೆಯಲ್ಲಿ ಸುಮಾರು 35 ವಯಸ್ಸಿನ ಮಹಿಳೆಯ ಶವ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಮೃತದೇಹವನ್ನು ಸ್ಥಳೀಯ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ.
ಸಾವನ್ನಪ್ಪಿದ ಮಹಿಳೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಬಳಗಾನೂರ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.