ರಾಯಚೂರು:ರೇಣುಕಾಚಾರ್ಯರಿಗೆ ಆರತಿ ಬೆಳಗುವ ವೇಳೆ ಮಹಿಳೆಯೊಬ್ಬರಿಗೆ ಬೆಂಕಿ ತಗುಲಿದ ಪ್ರಸಂಗ ನಡೆದಿದೆ. ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಅಬ್ಬರ ಪ್ರಚಾರ ನಡೆಸುತ್ತಿದ್ದಾರೆ. ಇಂದು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂತಹ ಹಂಚಿನಾಳ(ಯು) ಕ್ಯಾಂಪ್ಗೆ ಪ್ರಚಾರಕ್ಕಾಗಿ ಆಗಮಿಸಿದ್ದರು.
ರೇಣುಕಾಚಾರ್ಯಗೆ ಆರತಿ ಬೆಳಗುವಾಗ ಮಹಿಳೆ ಕೂದಲಿಗೆ ಬೆಂಕಿ.. ಕೂದಲೆಳೆ ಅಂತರದಲ್ಲಿ ಪಾರು - ಹೊನ್ನಾಳಿ ಶಾಸಕ ರೇಣುಕಾಚಾರ್ಯ
ಮಹಿಳೆಯರು ಆರತಿ ಮಾಡುವ ಮೂಲಕ ಬರ ಮಾಡಿಕೊಂಡರು. ಈ ವೇಳೆ ಆರತಿ ಬೆಳಗುವಾಗ ಮಹಿಳೆಯೊಬ್ಬಳ ಕೂದಲಿಗೆ ಬೆಂಕಿ ತಗುಲಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ರೇಣುಕಾಚಾರ್ಯಗೆ ಆರತಿ ಬೆಳಗುವ ವೇಳೆ ಮಹಿಳೆ ಕೂದಲಿಗೆ ತಗುಲಿದ ಬೆಂಕಿ
ಈ ವೇಳೆ ಮಹಿಳೆಯರು ಆರತಿ ಮಾಡುವ ಮೂಲಕ ಬರ ಮಾಡಿಕೊಂಡರು. ಈ ವೇಳೆ ಆರತಿ ಬೆಳಗುವಾಗ ಮಹಿಳೆಯೊಬ್ಬಳ ಕೂದಲಿಗೆ ಬೆಂಕಿ ತಗುಲಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಒಬ್ಬರ ಹಿಂದೆ ಒಬ್ಬರಂತೆ ಬಂದು ಆರತಿ ಬೆಳಗುವ ವೇಳೆ ಆಕಸ್ಮಿಕವಾಗಿ ಕೂದಲಿಗೆ ಬೆಂಕಿ ತಗುಲಿಗೆ. ತಕ್ಷಣ ಹಿಂದೆ ನಿಂತಿದ್ದ ಕಾರ್ಯಕರ್ತರು ಬೆಂಕಿ ಆರಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಇದರಿಂದ ಕೂದಲೆಳೆ ಅಂತರದಲ್ಲಿ ಅನಾಹುತವೊಂದು ತಪ್ಪಿದಂತಾಗಿದೆ.