ರಾಯಚೂರು: ತೋಳದ ದಾಳಿಗೆ ಒಳಗಾದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಜಿಲ್ಲೆಯ ನಡೆದಿದೆ.
ತೋಳದ ದಾಳಿಗೆ ವ್ಯಕ್ತಿ ಬಲಿ... ವೈದ್ಯರ ನಿರ್ಲಕ್ಷ್ಯ ಆರೋಪ - ರಾಯಚೂರು ತೋಳ ದಾಳಿ ಸುದ್ದಿ
ತೋಳದ ದಾಳಿಗೆ ಒಳಗಾದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಜಿಲ್ಲೆಯ ನಡೆದಿದೆ.

ತೋಳ ದಾಳಿಗೆ ಒಳಗಾದ ವ್ಯಕ್ತಿ ಸಾವು
ಜಿಲ್ಲೆಯ ಮಸ್ಕಿ ತಾಲೂಕಿನ ಚಿಲ್ಕರಾಗಿ ಗ್ರಾಮದ ಅಮರಪ್ಪ ಗುಂಡಪ್ಪ(45) ಮೃತ. ಕೆಲ ದಿನಗಳ ಹಿಂದೆ ಚಿಲ್ಕರಾಗಿ ಗ್ರಾಮದಲ್ಲಿ ಹುಚ್ಚು ಹಿಡಿದ ತೋಳದ ದಾಳಿಯಿಂದ 11 ಜನರು ಗಂಭೀರವಾಗಿ ಗಾಯಗೊಂಡಿದ್ದರು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯಿಂದ ಕೆಲವರು ಗುಣಮುಖರಾಗಿದ್ದಾರೆ,
ಅಮರಪ್ಪ ಗುಂಡಪ್ಪ ಎನ್ನುವ ವ್ಯಕ್ತಿ ಮೃತಪಟ್ಟಿದ್ದು, ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕವಿತಾಳ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.