ಕರ್ನಾಟಕ

karnataka

ETV Bharat / state

ಪ್ರಧಾನಿ ಮೋದಿ ಹೆಸರಿನ ಮೇಲೆ ಚುನಾವಣೆ ಎದುರಿಸುತ್ತೇವೆ: ಶಾಸಕ ಯತ್ನಾಳ್ - ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಸದ್ಯ ನನಗೆ ಮಂತ್ರಿಗಿರಿಗಿಂತ ಹೆಚ್ಚಿನ ಗೌರವ, ಅಧಿಕಾರ ಸಿಕ್ಕಿದೆ. ಮಂತ್ರಿ ಸ್ಥಾನಕ್ಕಾಗಿ ದೆಹಲಿ, ಬೆಂಗಳೂರು ಅಲೆಯುವ ಬದಲು ನನ್ನ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಿದ್ದೇನೆ ಎಂದು ಯತ್ನಾಳ್ ತಿಳಿಸಿದ್ದಾರೆ.

we-will-face-elections-on-name-of-pm-modi-says-bjp-mla-basangouda-patil-yatnal
ಪ್ರಧಾನಿ ಮೋದಿ ಹೆಸರಿನ ಮೇಲೆ ಚುನಾವಣೆ ಎದುರಿಸುತ್ತೇವೆ: ಶಾಸಕ ಯತ್ನಾಳ್

By

Published : Jul 1, 2022, 9:53 PM IST

ರಾಯಚೂರು: ರಾಜ್ಯದ ಯಾವುದೇ ನಾಯಕರಿಗೆ 2023ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವ ಶಕ್ತಿಯಿಲ್ಲ. ಪ್ರಧಾನಿ ನರೇಂದ್ರ ಮೋದಿ ಹೆಸರಿನ ಮೇಲೆ ಚುನಾವಣೆಯನ್ನು ಎದುರಿಸುತ್ತೇವೆ. ಅವರ ಹೆಸರಲ್ಲೇ ಇನ್ಮುಂದೆ ಚುನಾವಣೆಗೆ ಬರುತ್ತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಜಿಲ್ಲೆಯ ದೇವದುರ್ಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಮಂತ್ರಿ ಮಂಡಲ ಪುನಾರಚನೆ ಅಗತ್ಯವಿಲ್ಲ. ವಿಧಾನಸಭಾ ಚುನಾವಣೆಗೆ ಕೇವಲ ಆರು ತಿಂಗಳು ಮಾತ್ರವೇ ಬಾಕಿಯಿದೆ. ಹೀಗಿರುವಾಗ ಸಂಪುಟ ವಿಸ್ತರಣೆ ಮಾಡಿದರೆ ಯಾವುದೇ ಉಪಯೋಗವಿಲ್ಲ ಎಂದರು.


ಇಲ್ಲಿಯವರೆಗೆ ಸಂಪುಟ ವಿಸ್ತರಣೆಯನ್ನು ಚುನಾವಣೆ ನೆಪದಲ್ಲಿ ಮುಂದೂಡಲಾಗಿದೆ. ಮುಂದೆ ಕೂಡ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಆಗುವುದು ಅನುಮಾನ. ನಾನು ಸಚಿವ ಸ್ಥಾನವಾಗಲಿ ಸಿಎಂ ಸ್ಥಾನವನ್ನಾಗಲಿ ಕೇಳಿಲ್ಲ. ಸಚಿವರಾಗಲು ಪದೇ ಪದೆ ದೆಹಲಿಗೆ ಹೋಗಬೇಕು. ಸಿಎಂ ಮನೆ ಮುಂದೆ ಕಾಯಬೇಕು. ಬೆಂಗಳೂರಿಗೆ ಹೋಗಬೇಕು. ಇಂಥ ಕೆಲಸ ನಾನು ಮಾಡುವವನಲ್ಲ ಎಂದರು.

ಇದನ್ನೂ ಓದಿ:ಅಕ್ರಮ ಆಸ್ತಿ ಗಳಿಕೆ ಸಾಬೀತು: ಎಸ್​ಪಿಗೆ 1 ಕೋಟಿ ರೂ. ದಂಡ ವಿಧಿಸಿದ ಲೋಕಾಯುಕ್ತ ಕೋರ್ಟ್​

ABOUT THE AUTHOR

...view details