ಕರ್ನಾಟಕ

karnataka

ETV Bharat / state

ನಾರಾಯಣಪುರ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ 2.20ಲಕ್ಷ ಕ್ಯುಸೆಕ್ ನೀರು ಬಿಡುಗಡೆ

ಅಣೆಕಟ್ಟೆಯಿಂದ ಹೆಚ್ಚಿನ ನೀರು ಹರಿಬಿಟ್ಟಿದ್ದರಿಂದ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕು ಶೀಲಹಳ್ಳಿ ಸೇತುವೆ ಮುಳುಗಡೆ ಆಗಿದೆ. ನಡುಗಡ್ಡೆ ಪ್ರದೇಶದ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಮ್ಯಾದರಗಡ್ಡಿ, ವಕ್ಕಂನಗಡ್ಡಿ, ಕರಕಲಗಡ್ಡಿ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ..

Narayapura dam
Narayapura dam

By

Published : Aug 8, 2020, 12:14 PM IST

ರಾಯಚೂರು :ಮಹಾರಾಷ್ಟ್ರ ಸೇರಿದಂತೆ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಬಿದ್ದಿದ್ದರಿಂದ ಶನಿವಾರ ನಾರಾಯಣಪುರ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ 2.20 ಲಕ್ಷ ಕ್ಯುಸೆಕ್ ನೀರು ಹರಿಬಿಡಲಾಗಿದೆ.

ಅಣೆಕಟ್ಟು ಗರಿಷ್ಠ ಸಾಮರ್ಥ್ಯ 492.252 ಮೀಟರ್‌ನಲ್ಲಿ 490.780 ಮೀಟರ್ ನೀರಿನ ಮಟ್ಟ ಕಾಯ್ದುಕೊಂಡು ಹೆಚ್ಚುವರಿ 220670 ಕ್ಯುಸೆಕ್ ನೀರನ್ನು ಬೆಳಗ್ಗೆ 10 ಗಂಟೆಗೆ 21 ಕ್ರೆಸ್ಟ್ ಗೇಟ್‌ಗಳ ಮೂಲಕ ಹರಿಸಲಾಗುತ್ತಿದೆ.

ಅಣೆಕಟ್ಟೆಯಿಂದ ಹೆಚ್ಚಿನ ನೀರು ಹರಿಬಿಟ್ಟಿದ್ದರಿಂದ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕು ಶೀಲಹಳ್ಳಿ ಸೇತುವೆ ಮುಳುಗಡೆ ಆಗಿದೆ. ನಡುಗಡ್ಡೆ ಪ್ರದೇಶದ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಮ್ಯಾದರಗಡ್ಡಿ, ವಕ್ಕಂನಗಡ್ಡಿ, ಕರಕಲಗಡ್ಡಿ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸ್ಥಳಕ್ಕೆ ಅಧಿಕಾರಿಗಳು ವರ್ಷಕ್ಕೊಮ್ಮೆ ಪ್ರವಾಸಕ್ಕೆ ಬಂದು ಹೋಗುವಂತೆ ಬಂದು ಹೋಗುತ್ತಿದ್ದಾರೆ. ಸಂತ್ರಸ್ತ ಕುಟುಂಬಗಳು ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ABOUT THE AUTHOR

...view details