ಲಿಂಗಸುಗೂರು: ರಾಯಚೂರು ಜಿಲ್ಲೆ ಲಿಂಗಸುಗೂರು ಪುರಸಭೆ ಶಾಶ್ವತ ಕುಡಿವ ನೀರು ಸಂಗ್ರಹಣಾ ಕೆರೆಗೆ ರಾಂಪೂರ ಏತ ನೀರಾವರಿ ಯೋಜನೆಯಿಂದ ಶಾಸಕ ಡಿ.ಎಸ್. ಹೂಲಗೇರಿ ಅವರು ನೀರು ಬಿಡುಗಡೆ ಮಾಡಿದರು.
ಲಿಂಗಸುಗೂರು ಕೆರೆಗೆ ನೀರು ಬಿಡುಗಡೆ: ಶಾಸಕ ಹೂಲಗೇರಿ ಚಾಲನೆ - Water released to Lingasuguru lake
ಲಿಂಗಸುಗೂರು ಪುರಸಭೆ ಶಾಶ್ವತ ಕುಡಿವ ನೀರು ಸಂಗ್ರಹಣಾ ಕೆರೆಗೆ ರಾಂಪೂರ ಏತ ನೀರಾವರಿ ಯೋಜನೆಯಿಂದ ಶಾಸಕ ಡಿ.ಎಸ್. ಹೂಲಗೇರಿ ನೀರು ಬಿಡುಗಡೆ ಮಾಡಿದರು.

ಲಿಂಗಸುಗೂರು ಕೆರೆಗೆ ನೀರು ಬಿಡುಗಡೆ: ಶಾಸಕ ಹೂಲಗೇರಿ ಚಾಲನೆ
ಲಿಂಗಸುಗೂರು ಕೆರೆಗೆ ನೀರು ಬಿಡುಗಡೆ: ಶಾಸಕ ಹೂಲಗೇರಿ ಚಾಲನೆ
ನಂತರ ಮಾತನಾಡಿದ ಅವರು ಲಿಂಗಸುಗೂರು ಪುರಸಭೆ ವಾಪ್ತಿಯ 23 ವಾರ್ಡ್ಗಳಿಗೆ ನೀರು ಪೂರೈಸಲು ನಿರ್ಮಿಸಿಕೊಂಡಿರುವ ಕುಡಿವ ನೀರಿನ ಕೆರೆಗೆ ಈ ಬಾರಿ ನೀರು ಭರ್ತಿ ಮಾಡಿಕೊಳ್ಳಲು ಆಗಿರಲಿಲ್ಲ. ಹಾಗಾಗಿ ಏತ ನೀರಾವರಿ ಯೋಜನೆಯಿಂದ ವಿತರಣಾ ನಾಲೆ ಮೂಲಕ ನೀರು ತಂದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಇನ್ನು ಪುರಸಭೆ ವ್ಯಾಪ್ತಿ ಕಸಬಾ ಲಿಂಗಸುಗೂರು, ಕರಡಕಲ್ಲ ಹಾಗೂ ಲಿಂಗಸುಗೂರು ಜನತೆಗೆ ಈ ಮುಂಚಿನಂತೆಯೆ ನಿಗದಿತ ಅವಧಿಗೆ ನೀರು ಕೊಡಲಾಗುವುದು. ಅನಾವಶ್ಯಕ ಊಹಾ ಪೋಹಗಳಿಗೆ ಕಿವಿಗೊಡದಿರಿ. ಒಂದು ವಾರದಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕರುಭರವಸೆ ನೀಡಿದರು