ಕರ್ನಾಟಕ

karnataka

ETV Bharat / state

ಕೃಷ್ಣಾ ನದಿಗೆ 4 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ಪ್ರಸಿದ್ಧ ಅಲ್ಲಮಪ್ರಭುಲಿಂಗೇಶ್ವರ ದೇಗುಲ ಜಲಾವೃತ - Narayanapur reservoir

ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಅಧಿಕ ಪ್ರಮಾಣದ ನೀರು ಹರಿಬಿಡಲಾಗಿದ್ದು, ಇದರಿಂದ ರಾಯಚೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

Raichur
ಪ್ರಸಿದ್ಧ ಅಲ್ಲಮಪ್ರಭುಲಿಂಗೇಶ್ವರ ದೇಗುಲ ಜಲಾವೃತ

By

Published : Jul 29, 2021, 9:21 AM IST

ರಾಯಚೂರು:ನಾರಾಯಣಪುರ ಜಲಾಶಯದಿಂದ 30 ಕ್ರಸ್ಟ್ ಗೇಟ್‌ಗಳ ಮೂಲಕ 4 ಲಕ್ಷ ಕ್ಯೂಸೆಕ್​ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದ್ದು, ಇದರಿಂದ ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದ ಪ್ರಸಿದ್ಧ ಶ್ರೀ ಅಲ್ಲಮಪ್ರಭುಲಿಂಗೇಶ್ವರ ದೇವಾಲಯ ಜಲಾವೃತಗೊಂಡಿದೆ. ಅಲ್ಲದೇ, ಗ್ರಾಮದೊಳಗೆ ನೀರು ನುಗ್ಗುವ ಭೀತಿ ಶುರುವಾಗಿದೆ.

ಪ್ರಸಿದ್ಧ ಅಲ್ಲಮಪ್ರಭುಲಿಂಗೇಶ್ವರ ದೇಗುಲ ಜಲಾವೃತ

ಕೊಪ್ಪರ ಗ್ರಾಮದ ಶ್ರೀನರಸಿಂಹಸ್ವಾಮಿ ದೇಗುಲ ಕೂಡ ಮುಳಗಡೆಯಾಗಿದ್ದು, ದೇವದುರ್ಗ ಮಾರ್ಗವಾಗಿ ಶಹಾಪುರ, ಸುರಪುರ ಹಾಗೂ ಕಲಬುರಗಿ ಜಿಲ್ಲೆಗೆ ಸಂಪರ್ಕಿಸುವ ಹೂವಿನಹೆಡಗಿ ಬ್ರಿಡ್ಜ್ ಸಂಪೂರ್ಣ ಮುಳಗಡೆಯಾಗಿ ಸಂಚಾರ ಸ್ಥಗಿತವಾಗಿದೆ. ಸೇತುವೆ ಬಳಿಯ ಶ್ರೀ ಬಸವೇಶ್ವರ ದೇವಾಲಯವೂ ಜಲಾವೃತ್ತಗೊಂಡಿದೆ.

ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ, ರಾಯಚೂರು ತಾಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಮುಳಗಡೆಯಾಗಿ ಬ್ರಿಡ್ಜ್ ಮೇಲೆ ಸಂಚಾರ ಬಂದ್ ಮಾಡಲಾಗಿದೆ. ಕೃಷ್ಣಾ ನದಿ ಭೋರ್ಗರೆದು ಹರಿಯುತ್ತಿದ್ದು, ನದಿಪಾತ್ರದ ಹೊಲ, ಗದ್ದೆಗಳಿಗೆ ನೀರು‌ ನುಗ್ಗಿ ಬೆಳೆಗಳು ನಾಶವಾಗಿವೆ.

ಪ್ರವಾಹ ಭೀತಿ ಎದುರಿಸಲು ಜಿಲ್ಲಾಡಳಿತ ‌ಅಗತ್ಯಕ್ರಮ ಕೈಗೊಂಡಿದ್ದು, ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೃಷ್ಣಾ ನದಿ ಮೇಲ್ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಪರಿಣಾಮ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳಗೊಂಡು ಜಲಾಶಯದ ಹೆಚ್ಚುವರಿ ನೀರನ್ನ ನದಿಗೆ ಹರಿ ಬೀಡಲಾಗುತ್ತಿದೆ.

ಇದನ್ನೂ ಓದಿ:International Tiger day: ಬಂಡೀಪುರ ಅಂಚೆ ಕಚೇರಿ ಪ್ರತಿ ಕಡತದಲ್ಲೂ ಹುಲಿ ಹೆಜ್ಜೆ ಗುರುತು..!

ABOUT THE AUTHOR

...view details