ಕರ್ನಾಟಕ

karnataka

ETV Bharat / state

ನಾರಾಯಣಪುರ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ: ಪ್ರವಾಹ ಭೀತಿ - ಲಿಂಗಸುಗೂರು

ನಾರಾಯಣಪುರ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ ಮಧ್ಯಾಹ್ನ ವೇಳೆಗಾಗಲೇ 2.96 ಲಕ್ಷ ಕ್ಯುಸೆಕ್​ ನೀರು ಬಿಡಲಾಗಿದ್ದು, ಸೇತುವೆ ಮುಳುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದೆ.

ಕೃಷ್ಣಾ ನದಿಗೆ ನೀರು ಬಿಡುಗಡೆ
ಕೃಷ್ಣಾ ನದಿಗೆ ನೀರು ಬಿಡುಗಡೆ

By

Published : Aug 19, 2020, 2:56 PM IST

Updated : Aug 19, 2020, 3:21 PM IST

ಲಿಂಗಸುಗೂರು:ನಾರಾಯಣಪುರ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ ಮಧ್ಯಾಹ್ನದ ವೇಳೆಗಾಗಲೇ 2.96 ಲಕ್ಷ ಕ್ಯುಸೆಕ್​ ನೀರು ಬಿಡಲಾಗಿದ್ದು, ಪ್ರವಾಹ ಭೀತಿ ಎದುರಾಗಿದೆ.

ರಾಯಚೂರು ಜಿಲ್ಲೆ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ನಡುಗಡ್ಡೆ ಗ್ರಾಮ ಮತ್ತು ನಡುಗಡ್ಡೆ ಪ್ರದೇಶದ ಸಂಪರ್ಕ ಕಳೆದುಕೊಂಡಿದೆ. ಮ್ಯಾದರಗಡ್ಡಿ ಪ್ರದೇಶದಿಂದ ಜನರ ಸ್ಥಳಾಂತರಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಸ್ಥಳಾಂತರ ಕಾರ್ಯವನ್ನು ನಿಲ್ಲಿಸಲಾಗಿದೆ.

ಕೃಷ್ಣಾ ನದಿಗೆ ನಾರಾಯಣಪುರ ಡ್ಯಾಂನಿಂದ ನೀರು ಬಿಡುಗಡೆ

ನಾರಾಯಣಪುರ ಅಣೆಕಟ್ಟೆ ನೀರಿನ ಗರಿಷ್ಠ ಮಟ್ಟ 492.282 (ಅಡಿಗಳಲ್ಲಿ) ರ ಪೈಕಿ 489.400 ಕಾಯ್ದುಕೊಂಡು 28 ಕ್ರೆಸ್ಟ್ ಗೇಟ್​ಗಳ ಮೂಲಕ 2,96,080 ಕ್ಯುಸೆಕ್ ನೀರು ಹೊರಬಿಡಲಾಗಿದೆ.

Last Updated : Aug 19, 2020, 3:21 PM IST

ABOUT THE AUTHOR

...view details