ಲಿಂಗಸುಗೂರು: ನಾರಾಯಣಪುರ (ಬಸವಸಾಗರ) ಅಣೆಕಟ್ಟೆಯಿಂದ ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಹರಿಬಿಟ್ಟಿದ್ದು, ನದಿ ಪಾತ್ರದ ಜನತೆ ಸುರಕ್ಷಿತ ಎತ್ತರದ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಅಣೆಕಟ್ಟೆ ಮುಖ್ಯ ಎಂಜಿನಿಯರ್ ರಂಗರಾಮ ಮನವಿ ಮಾಡಿದ್ದಾರೆ.
ನಾರಾಯಣಪುರ ಡ್ಯಾಂನಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ: ನದಿ ಪಾತ್ರದ ಜನರ ಸ್ಥಳಾಂತರಕ್ಕೆ ಮನವಿ
ನಾರಾಯಣಪುರ ಅಣೆಕಟ್ಟೆಯಿಂದ ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದ್ದು, ಇಂದು 10 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ.
Dam
ಇಂದು ಅಣೆಕಟ್ಟೆಯ ಗೇಟ್ಗಳಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ರಾಯಚೂರು, ಯಾದಗಿರಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸುರಕ್ಷತೆ ಬಗ್ಗೆ ಪತ್ರ ಬರೆಯಲಾಗಿದೆ. ಇಂದು 10 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ ಎಂದರು.
ಆಲಮಟ್ಟಿ ಜಲಾಶಯ ಭರ್ತಿಯಾಗಿದ್ದು, ಅಲ್ಲಿಂದ 45 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಹಂತ ಹಂತವಾಗಿ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಹರಿಬಿಡಲಾಗುವುದು. ಅಣೆಕಟ್ಟೆ ನೀರಿನ ಸಾಮರ್ಥ್ಯ 492.252 ಮೀಟರ್ನಲ್ಲಿ 491.400 ಮೀ. ಕಾಯ್ದಿಟ್ಟು ಹೆಚ್ಚುವರಿ ನೀರು ಬಿಡಲಾಗಿದೆ ಎಂದು ವಿವರಿಸಿದರು.