ರಾಯಚೂರು: ಲಿಂಗಸೂಗುರು ಪುರಸಭೆ ವ್ಯಾಪ್ತಿಯ ಬಹುತೇಕ ವಾರ್ಡ್ಗಳಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಪುರಸಭೆ 23 ವಾರ್ಡ್ಗಳಿಗೆ ಸಮರ್ಪಕ ಶುದ್ಧ ಕುಡಿಯುವ ನೀರು ಪೂರೈಸುವಲ್ಲಿ ಆಡಳಿತ ಮಂಡಳಿ ತಾತ್ಸಾರ ಭಾವ ತೋರುತಿದ್ದು, ನಾಗರಿಕರು ನೀರಿಗಾಗಿ ಪರದಾಡುವಂತಾಗಿದೆ.
ಲಿಂಗಸೂಗುರಲ್ಲಿ ಕುಡಿಯುವ ನೀರಿನ ಸಮಸ್ಯೆ ಪಟ್ಟಣದ ಮಹಾಂತೇಶ್ವರ ಮಠ, ಜನತಾ ಕಾಲೋನಿ ಸೇರಿದಂತೆ ಕೆಲ ಬಡಾವಣೆಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗಿಲ್ಲ. ಗುರುಗುಂಟಾ ಮತ್ತು ನಾರಾಯಣಪುರ ರಸ್ತೆ ಬಡಾವಣೆಗಳ ಜನತೆ ರಾತ್ರಿಯೆಲ್ಲಾ ಜಲಶುದ್ಧೀಕರಣ ಘಟಕದ ಬಳಿಯಿಂದ ನೀರು ತರುತ್ತಿದ್ದಾರೆ.
ಶಾಸಕರು, ಮಾಜಿ ಶಾಸಕರು, ಉದ್ಯಮಿಗಳು, ಪ್ರತಿಷ್ಠಿತ ವ್ಯಕ್ತಿಗಳು ವಾಸಿಸುತ್ತಿರುವ ಬಡಾವಣೆಗಳಿಗೆ ಮಾತ್ರ ಸರ್ಕಾರದ ಯೋಜನೆಗಳು ಬಳಕೆಯಾಗುತ್ತಿವೆ ಹೊರತು ಸಾಮಾನ್ಯ ಜನತೆ ವಾಸಿಸುವ ಬಡಾವಣೆಗಳಿಗೆ ಸೌಲಭ್ಯ ಸಿಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.