ರಾಯಚೂರು: ಇವರೆಲ್ಲರೂ ನದಿ ಪಾತ್ರದಲ್ಲಿ ವಾಸಿಸುವ ಜನರು. ಇವರಿಗೆ ಮಳೆಗಾಲದಲ್ಲಿ ಹರಿಯುವ ಹಳ್ಳ - ಕೊಳ್ಳ ಹಾಗೂ ನದಿಯ ನೀರು ವ್ಯವಸಾಯಕ್ಕೆ ಆಸರೆ. ಆದ್ರೆ, ಕಾರ್ಖಾನೆಯಿಂದ ಹೊರ ಬರುವಂತಹ ರಾಸಾಯನಿಕ ಮಿಶ್ರಿತ ನೀರು ಈಗ ಇವರಿಗೆ ಕಂಟಕವಾಗಿದೆ.
ಹರಿದು ಬರುತ್ತಿರುವ ಕೆಮಿಕಲ್ ಮಿಶ್ರಿತ ನೀರಿನಿಂದ ಕೃಷಿಗೆ ಅಡಚಣೆ ಉಂಟಾಗಿ, ಜನ-ಜಾನುವಾರುಗಳಿಗೆ ಕಂಟಕವಾಗಿದೆ. ಈ ನೀರಿನಿಂದ ಸಾವಿರಾರು ಮೀನುಗಳು ಹಾಗೂ ಇತರ ಜಲಚರಗಳು ಸಾವಿಗೀಡಾಗುತ್ತಿವೆ.
ತ್ಯಾಜ್ಯ ನೀರಿನಿಂದ ಜಲಚರಗಳ ಮಾರಣಹೋಮ ರಾಯಚೂರು ತಾಲೂಕಿನ ಶಕ್ತಿನಗರದ ಸುತ್ತಮುತ್ತಲಿನ ಪರಿಸರದಲ್ಲಿ ಈ ಅವ್ಯವಸ್ಥೆ ತಾಂಡವವಾಡುತ್ತಿದೆ. ಶಕ್ತಿನಗರದಿಂದ ಗುಜಳ್ಳಿಗೆ ತೆರಳುವ ಮಾರ್ಗ ಮಧ್ಯೆ ಬರುವಂತಹ ನಾನಾ ಫ್ಯಾಕ್ಟರಿಗಳು ತ್ಯಾಜ್ಯ ನೀರನ್ನು ಕೆರೆ ಹಾಗೂ ನದಿಗಳಿಗೆ ಬಿಟ್ಟು ಸಾರ್ವಜನಿಕರ ಹಾಗೂ ಜಲಚರಗಳ ಜೀವಕ್ಕೆ ಕುತ್ತು ತರುತ್ತಿದ್ದಾರೆ.
ವಡ್ಲೂರು, ಹನುಮದೊಡ್ಡಿ, ಗುಜಳ್ಳಿ, ಕೊರವಿಹಾಳ, ಕೊರ್ತಕುಂದ ರಾಂಪುರ ಸೇರಿದಂತೆ ಹಲವು ಗ್ರಾಮಗಳ ಜನರಿಗೆ ಮತ್ತು ರೈತರಿಗೆ ತೊಂದರೆ ಇಲ್ಲಿನ ನದಿ ಹಾಗೂ ಕೆರೆಗಳೇ ನೀರಿನ ಮೂಲವಾದ್ದರಿಂದ ಜನರು ಈ ನೀರು ಸೇವಿಸಿ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ.