ರಾಯಚೂರು:ಜಿಲ್ಲೆಯಲ್ಲಿ ಕೃಷ್ಣಾ ನದಿ ತುಂಬಿ ಹರಿಯುತ್ತಿರಯವ ಕಾರಣ ನದಿ ತೀರದ ಗ್ರಾಮಗಳಿಗೆ ಸಂಕಷ್ಟ ಎದುರಾಗಿದ್ದು, ಜಿಲ್ಲಾಡಳಿತ ಹಾಗೂ ಎನ್ಡಿಆರ್ಎಸ್ ತಂಡ ಹಲವೆಡೆ ಬೀಡು ಬಿಟ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಮೂಲಕ ಸಂಕಷ್ಟ ಸಮಯದಲ್ಲಿ ಜನರ ನೆರವಿಗೆ ಬರಲು ಸಜ್ಜಾಗಿದೆ.
ಮಹಾಮಳೆಗೆ ಕೃಷ್ಣೆಯ ಆರ್ಭಟ: ಅಪಾಯದ ಮಟ್ಟ ತಲುಪಿದ ಗುರ್ಜಾಪುರ ಬ್ಯಾರೇಜ್ - koyna dam
ಜಿಲ್ಲೆಯಲ್ಲಿ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು, ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ನಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಜನರನ್ನು ಅಲ್ಲಿಗೆ ಹೋಗದಂತೆ ತಡೆಯಲು ಬೇಲಿ ಹಾಕಲಾಗಿದೆ.
ಗುರ್ಜಾಪುರ ಬ್ಯಾರೇಜ್
ಮತ್ತೊಂದು ಕಡೆ ರಾಯಚೂರು ತಾಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ನಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಅಪಾಯದ ಮುನ್ಸೂಚನೆ ಹಿನ್ನೆಲೆಯಲ್ಲಿ ಜನರನ್ನು ಅಲ್ಲಿಗೆ ಹೋಗದಂತೆ ಬೇಲಿ ಹಾಕಲಾಗಿದೆ. ಮಹಾರಾಷ್ಟ್ರದ ಕೋಯ್ನಾ ಡ್ಯಾಂ ಮೂಲಕ ನೀರು ಹರಿಬಿಡಲಾಗಿದೆ. ಹಾಗಾಗಿ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವ ಕಾರಣ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ನಲ್ಲಿನ ಜನರಲ್ಲಿ ಆತಂಕ ಮನೆ ಮಾಡಿದೆ. ಕಾಡ್ಲೂರು, ಗುರ್ಜಾಪುರ, ಅರಷಿಣಗಿ, ಕರೆಕಲ್ ಗ್ರಾಮಗಳು ಸನಿಹದಲ್ಲಿದ್ದು ಒಂದು ಹಂತದಲ್ಲಿ ಇಲ್ಲಿ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.