ರಾಯಚೂರು: ಕೆಲಸದಿಂದ ವಜಾಗೊಳಿಸಿದ ಕಾರ್ಮಿಕರ ಮರು ನೇಮಕ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ವೈಟಿಪಿಎಸ್ ಮುಂದೆ ಉಪವಾಸ ಸತ್ಯಾಗ್ರಹ ನಡೆಸುತಿದ್ದ ಕಾರ್ಮಿಕನೋರ್ವ ಇಂದು ಅಸ್ವಸ್ಥನಾದ ಘಟನೆ ನಡೆದಿದೆ.
ಉಪವಾಸ ಸತ್ಯಾಗ್ರಹ ವೇಳೆ ಅಸ್ವಸ್ಥಗೊಂಡ ವೈಟಿಪಿಎಸ್ ಕಾರ್ಮಿಕ - kannadanews
ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವೇಳೆ ಕಾರ್ಮಿಕನೊಬ್ಬ ಅಸ್ವಸ್ಥಗೊಂಡಿರುವ ಘಟನೆ ರಾಯಚೂರಿನ ವೈಟಿಪಿಎಸ್ ಮುಂದೆ ನಡೆದಿದೆ.
ಉಪವಾಸ ಸತ್ಯಗ್ರಹ ವೇಳೆ ಕಾರ್ಮಿಕ ಅಸ್ವಸ್ಥ
ಕಳೆದ ಕೆಲವು ದಿನಗಳಿಂದ ನಡೆಸುತಿದ್ದ ಧರಣಿಗೆ ಸ್ಪಂದನೆ ದೊರೆಯದಿದ್ದಾಗ ನೊಂದ ಕಾರ್ಮಿಕರು ಇತ್ತೀಚೆಗೆ ಉಪವಾಸ ಸತ್ಯಾಗ್ರಹ ಅರಂಭಿಸಿದ್ರು. ಪ್ರತಿ ದಿನ ಸರದಿಯಂತೆ ಉಪವಾಸ ಸತ್ಯಾಗ್ರಹ ನಡೆಸುತಿದ್ದು, ಇಂದು ಧರಣಿನಿರತ ಕಾರ್ಮಿಕ ಅಸ್ವಸ್ಥನಾಗಿದ್ದಾನೆ. ಅಸ್ವಸ್ಥ ಕಾರ್ಮಿಕನನ್ನು ಚಿಕಿತ್ಸೆಗೆ ಸ್ಥಳೀಯ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.