ರಾಯಚೂರು: ರೋಗಿಗಳಿಗೆ ತುರ್ತು ರಕ್ತದ ಕೊರತೆ ನೀಗಿಸುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಗರದ ಜೈನ ಭವನದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು.
ಮೇ 1ರಿಂದ ದೇಶವ್ಯಾಪಿ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಲಿದೆ. ಯುವ ಸಮುದಾಯ ಈ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಭಾಗಿಯಾದರೆ, 60 ದಿನಗಳವರೆಗೆ ರಕ್ತದಾನ ಮಾಡಲು ಸಾಧ್ಯವಿಲ್ಲ. ಈ ಸಮಯದಲ್ಲಿ ರೋಗಿಗಳಿಗೆ ಅವಶ್ಯಕವಿರುವ ರಕ್ತದ ಕೊರತೆ ನೀಗಿಸುವುದು ಅಗತ್ಯ. ಹೀಗಾಗಿ, ಯುವಕರು ಲಸಿಕೆ ಪಡೆಯುವ ಮುನ್ನ ಸ್ವಯಂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.