ಲಿಂಗಸುಗೂರು(ರಾಯಚೂರು):ತಾಲೂಕಿನ ವೀರಶೈವ ಜಂಗಮ ಸಮಾಜದ ಸದಸ್ಯರು ಬೋಗೂರು ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಿದರು.
ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ: ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ವೀರಶೈವ ಜಂಗಮ ಸಮಾಜ ಆಗ್ರಹ - Lingasuguru latest news
ಲಿಂಗಸುಗೂರು ತಾಲೂಕಿನ ವೀರಶೈವ ಜಂಗಮ ಸಮಾಜದ ಸದಸ್ಯರು ಬೋಗೂರು ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಿದರು. ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿದರು.
ಧಾರವಾಡ ಜಿಲ್ಲೆ ಬೋಗೂರು ಗ್ರಾಮದ ಅಪ್ರಾಪ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ನಾಗರಿಕ ಸಮಾಜ ತಗ್ಗಿಸುವಂತೆ ಮಾಡಿದೆ. ನಿರ್ಭಯಾ, ದಿಶಾರಂತ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ಆಗಿದ್ದರು ಕೂಡ ಕಾಮಾಂಧರು ಪಾಠ ಕಲಿಯುತ್ತಿಲ್ಲ. ಅತ್ಯಾಚಾರ, ಕೊಲೆ, ಲೈಂಗಿಕ ಕಿರುಕುಳ ನಿಡುತ್ತಿರುವ ದುಷ್ಟಶಕ್ತಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತ ಕಾನೂನು ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು.
ಹಿಂದೂ, ಸನಾತನ ಧರ್ಮ, ಆಚರಣೆ, ಕಲೆ, ಸಂಸ್ಕೃತಿ ಉಳಿಸಿ ಬೆಳೆಸುತ್ತಿರುವ ಪಂಚಪೀಠಗಳು, ಸ್ವಾಮೀಜಿ, ಅರ್ಚಕರು, ದಾರ್ಶನಿಕರ ಮೇಲೆ ನಡೆಯುತ್ತಿರು ದೌರ್ಜನ್ಯ ತಡೆಯಲು ಸರ್ಕಾರ ಮುಂದಾಗಬೇಕು. ಹಿಂದೂ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ತರುವಂತೆ ಆಗ್ರಹಿಸಿದರು.