ರಾಯಚೂರು :ರಾಜ್ಯದಲ್ಲಿ ಸುಭಿಕ್ಷೆವಾಗಿ ಮಳೆಯಾಗಲಿ ಎಂದು ಜಿಲ್ಲೆಯ ಆಮದಿಹಾಳ ಗ್ರಾಮದ ಜನರು ದೇವರಿಗೆ ಜಲಾಭಿಷೇಕ ಮಾಡಿ ಮಳೆಗಾಗಿ ಪ್ರಾರ್ಥಿಸಿದರು.
ವರುಣನ ಕೃಪೆಗಾಗಿ ಶ್ರೀರಾಮಲಿಂಗೇಶ್ವರನಿಗೆ ಜಲಾಭಿಷೇಕ! - Kannada news
ಸತತವಾಗಿ ಜಿಲ್ಲೆಯಲ್ಲಿ ಬರಗಾಲ ಆವರಿಸುತ್ತಿದ್ದು, ಜನ - ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. ಈಗ ಮುಂಗಾರು ಮಳೆ ಸಹ ಜಿಲ್ಲೆಯಲ್ಲಿ ಕೈಕೊಟ್ಟ ಹಿನ್ನೆಲೆಯಲ್ಲಿ, ಜನರನ್ನ ಸಂಕಷ್ಟದಿಂದ ಪಾರು ಮಾಡುವಂತೆ ಪ್ರಾರ್ಥಿಸಿದರು.
ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆಮದಿಹಾಳ ಗ್ರಾಮದ ಆರಾಧ್ಯ ದೈವ ಶ್ರೀರಾಮಲಿಂಗೇಶ್ವರ ದೇವಾಲಯದ ದೇವರಿಗೆ ಜಲಾಭಿಷೇಕ ಮಾಡುವ ಮೂಲಕ ಸಾಮೂಹಿಕವಾಗಿ ಮಳೆ ಸುರಿಯುವಂತೆ ಪ್ರಾರ್ಥಿಸಲಾಯಿತು.
ಗ್ರಾಮಸ್ಥರೆಲ್ಲಾ ಸೇರಿಕೊಂಡು ಮಡಿಯಾಗಿ ಭಕ್ತಿ ಭಾವದಿಂದ ಶಿವನಾಮ ಸ್ಮರಣೆಯೊಂದಿಗೆ 650 ಕ್ಕೂ ಜನರು ಬಾವಿಯಿಂದ 505 ಬಿಂದಿಗೆ ನೀರನ್ನ ತೆಗೆದುಕೊಂಡು ಬಂದು ಶ್ರೀರಾಮಲಿಂಗೇಶ್ವರ ದೇವರಿಗೆ ಜಲಾಭಿಷೇಕ ನೇರವೇರಿಸಿದ್ರು. ಸತತವಾಗಿ ಜಿಲ್ಲೆಯಲ್ಲಿ ಬರಗಾಲ ಆವರಿಸುತ್ತಿದ್ದು, ಜನ-ಜಾನುವಾರುಗಳಿಗೆ ನೀರು ಸಮಸ್ಯೆ ಎದುರಾಗಿದೆ. ಈಗ ಮುಂಗಾರು ಮಳೆ ಸಹ ಜಿಲ್ಲೆಯಲ್ಲಿ ಕೈಕೊಟ್ಟ ಹಿನ್ನೆಲೆ, ಜನರನ್ನ ಸಂಕಷ್ಟದಿಂದ ಪಾರು ಮಾಡುವಂತೆ ಪ್ರಾರ್ಥಿಸಿದ್ರು.