ರಾಯಚೂರು :ಕಳೆದ 2 ವರ್ಷಗಳಿಂದ ಹದ್ದಗೆಟ್ಟ ರಸ್ತೆಯನ್ನು ದುರಸ್ತಿ ಮಾಡುವಂತೆ ಗ್ರಾಮಸ್ಥರು ಸಂಬಂಧಿಸಿದ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ರು. ಆದ್ರೆ, ಮನವಿಗೆ ಸ್ಪಂದಿಸಿದ ಅಧಿಕಾರಿಗಳ ನಡೆಗೆ ಬೇಸತ್ತ ಗ್ರಾಮಸ್ಥರು ಇದೀಗ ಸ್ವಂತ ಹಣದಿಂದ ರಸ್ತೆ ನಿರ್ಮಾಣ ಮಾಡಿಕೊಂಡಿದ್ದಾರೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಉದ್ಬಾಳ(ಯು)ನಿಂದ ಹಸಮಕಲ್ ರಸ್ತೆ ಹದ್ದಗೆಟ್ಟಿತ್ತು. ಇದರಿಂದ ಗ್ರಾಮಸ್ಥರು ನಿತ್ಯ ಓಡಾಡುವಾಗ ತೊಂದರೆ ಅನುಭವಿಸುತ್ತಿದ್ದರು. ಸಂಬಂಧಿಸಿದ ಅಧಿಕಾರಿಗಳು ತಮ್ಮ ಕೂಗಿಗೆ ಸ್ಪಂದಿಸದೇ ಇರುವುದರಿಂದ ಗ್ರಾಮಸ್ಥರೇ ಹಣ ಸಂಗ್ರಹಿಸುವ ಮೂಲಕ 10 ಟಿಪ್ಪರ್, 4 ಟ್ರ್ಯಾಕ್ಟರ್, 2 ಹಿಟಾಚಿ ಹಾಗೂ 20 ಜನ ಕಾರ್ಮಿಕರಿಂದ ಸುಮಾರು 3.5 ಕಿ.ಮೀ.ವರೆಗೆ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಿಕೊಂಡಿದ್ದಾರೆ.