ರಾಯಚೂರು:ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಸಿಂಧನೂರು ತಾಲೂಕಿನಲ್ಲಿ ಭಾರಿ ಮಳೆ ಸುರಿದ ಪರಿಣಾಮ ಸಾಲಗುಂದಾ ಗ್ರಾಮದಲ್ಲಿ ನೆರೆಯಿಂದಾಗಿಮನೆಗಳು ನೀರಿನಿಂದ ಭಾಗಶಃ ಮುಳುಗಿವೆ.
ಭಾರಿ ಮಳೆಯಿಂದ ಸಾಲಗುಂದಾ ಗ್ರಾಮಕ್ಕೆ ಜಲದಿಗ್ಬಂಧನ.. ನೀರಿನಲ್ಲಿ ಭಾಗಶಃ ಮುಳುಗಿರುವ ಮನೆಗಳು.. - chief minister yadiyurappa
ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ರಾಯಚೂರು ಜಿಲ್ಲೆಯ ಸಾಲಗುಂದಾ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.
ಪ್ರವಾಹದಿಂದ ರಾಯಚೂರಿನ ಸಾಲಗುಂದಾ ಗ್ರಾಮ ಜಲದ್ಬಿಂಧನ
ಮನೆಯಲ್ಲಿದ್ದ ಧವಸ-ಧಾನ್ಯಗಳು, ಗೃಹೋಪಯೋಗಿ ಸಾಮಾನುಗಳು ನೀರು ಪಾಲಾಗಿ ಜನ-ಜೀವನ ಸಂಪೂರ್ಣ ಹದಗಟ್ಟಿದೆ. ಎಲ್ಲೆಂದರಲ್ಲೆ ನೀರು ನಿಂತಿರುವುದರಿಂದ ಮನೆ ಬಿಟ್ಟು ಹೊರ ಬರದ ಪರಿಸ್ಥಿತಿ ಸಾಲಗುಂದಾ ಗ್ರಾಮದಲ್ಲಿ ನಿರ್ಮಾಣವಾಗಿದೆ.
ಗ್ರಾಮದಲ್ಲಿನ ಹರಿಯುತ್ತಿರುವ ನೀರಿನ ಕುರಿತು ವಿಡಿಯೋವನ್ನು ಮಾಡಿರೋ ಸ್ಥಳೀಯರು ಯಡಿಯೂರಪ್ಪ ನೆರೆ ಸಂತ್ರಸ್ತರಿಗೆ ಪರಿಹಾರ ಎಲ್ಲಿ ಕೊಟ್ಟಿದ್ದೀಯಪ್ಪ, ಇನ್ನೂ ನಮಗ ಯಾವಾಗ ಕೊಡುತ್ತೀಯಪ್ಪ ಎಂದು ಅದೇ ವಿಡಿಯೋದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಈಗ ಹೆಚ್ಚು ವೈರಲಾಗ್ತಿದೆ.