ಕರ್ನಾಟಕ

karnataka

ಕೃಷ್ಣಾ ಪ್ರವಾಹದಲ್ಲಿ ಸಿಲುಕಿದವರ ನೆರವಿಗೆ ಮುಂದಾಗದಿರುವುದಕ್ಕೆ ಸಂತ್ರಸ್ತರ ಆಕ್ರೋಶ

By

Published : Aug 9, 2020, 7:07 PM IST

ಲಿಂಗಸುಗೂರು ತಾಲ್ಲೂಕು ಯರಗೋಡಿ ಬಳಿ ಮ್ಯಾದರ (ಹರಲ)ಗಡ್ಡಿ ಜನತೆ ಐದು ದಿನಗಳಿಂದ ಕೃಷ್ಣಾ ಪ್ರವಾಹದಲ್ಲಿ ಸಿಲುಕಿದವರ ನೆರವಿಗೆ ಮುಂದಾಗದಿರುವುದಕ್ಕೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

lingasuguru
ಕೃಷ್ಣಾ ಪ್ರವಾಹದಲ್ಲಿ ಸಿಲುಕಿದವರ ನೆರವಿಗೆ ಮುಂದಾಗದ ಆಡಳಿತ ವ್ಯವಸ್ಥೆ

ಲಿಂಗಸುಗೂರು: ತಾಲ್ಲೂಕು ಯರಗೋಡಿ ಬಳಿ ಮ್ಯಾದರ (ಹರಲ)ಗಡ್ಡಿ ಜನತೆ ಐದು ದಿನಗಳಿಂದ ಕೃಷ್ಣಾ ಪ್ರವಾಹದಲ್ಲಿ ಸಿಲುಕಿದವರ ನೆರವಿಗೆ ಮುಂದಾಗದಿರುವುದಕ್ಕೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಪ್ರವಾಹ ಆರಂಭಕ್ಕಿಂತ ಮುಂಚೆಯೇ ನಡುಗಡ್ಡೆಯಲ್ಲಿದ್ದವರ ಸ್ಥಳಾಂತರ ಮಾಡಲಾಗಿತ್ತು. ಉಳಿದ ಕೆಲವರನ್ನು ಬೋಟ್ ಮೂಲಕ ಒತ್ತಾಯದಿಂದ ಕರೆ ತರಲಾಗಿತ್ತು. ಮ್ಯಾದರಗಡ್ಡಿ (14), ಕರಕಲಗಡ್ಡಿ (4) ಜನ ಪ್ರವಾಹದ ನಡುವೆ ಸಿಲುಕಿದ್ದು, ಯಾವೊಬ್ಬ ಅಧಿಕಾರಿ ನೆರವಿಗೆ ಮುಂದಾಗದಿರುವುದು ನೋವಿನ ಸಂಗತಿ. ದಶಕಗಳಿಂದ ಪ್ರವಾಹ ಪೂರ್ವ, ಪ್ರವಾಹ ಸಂದರ್ಭ ಬಂದಾಗ ನಡುಗಡ್ಡೆ ಗ್ರಾಮಗಳಲ್ಲಿ ಬಿಡಾರ ಹೂಡುತ್ತಿದ್ದ ಅಧಿಕಾರಿಗಳ ತಂಡ ಕಾಣ ಸಿಗುತ್ತಿಲ್ಲ. ಲಕ್ಷಾಂತರ ಕ್ಯುಸೆಕ್ ನೀರು ಹರಿಬಿಟ್ಟಿದ್ದರೂ ಕೂಡ ಸ್ಥಳಾಂತರಕ್ಕೆ ಮುಂದಾಗುವದಿರಲಿ, ಮಾನವೀಯತೆ ಆಧರಿಸಿ ಪಡಿತರ ನೀಡಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಕೃಷ್ಣಾ ಪ್ರವಾಹದಲ್ಲಿ ಸಿಲುಕಿದವರ ನೆರವಿಗೆ ಮುಂದಾಗದ ಆಡಳಿತ ವ್ಯವಸ್ಥೆ

ನಡುಗಡ್ಡೆಯಲ್ಲಿ ಸಿಲುಕಿರುವ ನಾವುಗಳು ಬಹುತೇಕರು ಪರಿಶಿಷ್ಟ ಜಾತಿಯವರಾಗಿದ್ದೇವೆ. ಶಾಶ್ವತ ವ್ಯವಸ್ಥೆಗೆ ಹೋರಾಟ ನಡೆಸಿದ್ದು ಶಾಪವಾಗಿ ಪರಿಣಮಿಸಿದೆ. ಬೆಳೆ ಜಾನುವಾರ ನಷ್ಟ ಪರಿಹಾರದ ಬಿಡಿಕಾಸೂ ಕಂಡಿಲ್ಲ ಎಂದು ವಯೋವೃದ್ಧೆ ಅಮರಮ್ಮ ಹಿಡಿಶಾಪ ಹಾಕಿದ್ದಾರೆ.

ಈ ವರ್ಷ ನಡುಗಡ್ಡೆಗಳಲ್ಲಿ ಬಿತ್ತನೆ ಕೂಡ ಮಾಡಿಕೊಂಡಿಲ್ಲ. ನಮ್ಮ ಬದುಕು ಹಾಳಾಗಿ ಹೋಗಿದೆ. ಸರ್ಕಾರ ಶಾಶ್ವತ ವ್ಯವಸ್ಥೆ ಮಾಡಲಿ ಅಥವಾ ಪ್ರವಾಹ ಬಂದಾಗ ಅಗತ್ಯ ಸಹಾಯ ನೀಡಲಿ ಎಂದು ಮಲ್ಲಪ್ಪ, ಹೊಳೆಯಪ್ಪ ಒತ್ತಾಯಿಸಿದ್ದಾರೆ.

ABOUT THE AUTHOR

...view details