ರಾಯಚೂರು:ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಿದ್ರು ಆ ಅವಧಿಯಲ್ಲಿ ಸಚಿವರಾಗಿದ್ದ ಶಾಸಕ ವೆಂಕಟರಾವ್ ನಾಡಗೌಡ ಹೆಸರು ಮಾತ್ರ ನಾಮಫಲಕದಲ್ಲಿ ಇನ್ನೂ ಸಚಿವ ಅಂತಾ ಹಾಗೆಯೇ ಇದೆ.
ನಾಮಫಲಕದಲ್ಲಿ ಇನ್ನೂ ಹಾಲಿ ಸಚಿವರಾಗಿಯೇ ಉಳಿದ ಶಾಸಕ ವೆಂಕಟರಾವ್ ನಾಡಗೌಡ! - ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ
ಸಿಂಧನೂರಿನ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವೆಂಕಟರಾವ್ ನಾಡಗೌಡ ಮೈತ್ರಿ ಸರ್ಕಾರದ ಅವಧಿಯಲ್ಲಿ ಪಶುಸಂಗೋಪನೆ ಸಚಿವರಾಗಿದ್ದರು. ಅಂದು ಹಾಕಲಾದ ನಾಮಫಲಕವನ್ನು ಇಂದಿಗೂ ಕೂಡ ತೆಗೆದಿಲ್ಲ.

ಶಾಸಕ ವೆಂಕಟರಾವ್ ನಾಡಗೌಡ
ಹೌದು, ಸಿಂಧನೂರಿನ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವೆಂಕಟರಾವ್ ನಾಡಗೌಡ ಹಿಂದಿನ ಮೈತ್ರಿ ಸರ್ಕಾರದಲ್ಲಿ ಪಶುಸಂಗೋಪನೆ ಸಚಿವರಾಗಿದ್ದರು. ಆಗ ಅವರ ಕಚೇರಿಗೆ ಹಾಕಲಾಗಿದ್ದ ನಾಮಫಲಕವನ್ನು ಇನ್ನೂ ತೆಗೆದಿಲ್ಲ.
ನಾಮಫಲಕದಲ್ಲಿ ಹಾಲಿ ಸಚಿವರಾಗಿ ಉಳಿದ ಶಾಸಕ ವೆಂಕಟರಾವ್ ನಾಡಗೌಡ
ಸರ್ಕಾರ ಪತನವಾಗಿ ಹಲವು ದಿನಗಳು ಕಳೆದು ವೆಂಕಟರಾವ್ ನಾಡಗೌಡ ಈಗ ಮಾಜಿ ಸಚಿವರಾಗಿ, ಹಾಲಿ ಶಾಸಕರಾಗಿದ್ದಾರೆ. ಆದ್ರೆ ಅವರು ಸಚಿವರಾಗಿದ್ದ ಸಮಯದಲ್ಲಿ ಹಾಕಲಾದ ನಾಮಫಲಕವನ್ನ ಮಾತ್ರ ತೆರವು ಮಾಡಿಲ್ಲ. ಅಲ್ಲದೆ ಸಚಿವ ಅಂತಾ ಬರೆದಿರುವ ನಾಮಫಲಕ ಇಂದಿಗೂ ರಾರಾಜಿಸುತ್ತಿದೆ.