ರಾಯಚೂರು: ಲಾಕ್ಡೌನ್ ನಿಯಮ ಉಲ್ಲಂಘಿಸಿ ತರಕಾರಿ ಮಾರಾಟ ಮಾಡುತ್ತಿದ್ದವರನ್ನು ಎಬ್ಬಿಸಿ, ತರಕಾರಿಯನ್ನು ಬೂಟ್ ಕಾಲಿನಿಂದ ಒದ್ದಿದ್ದ ಸದರ್ಬಜಾರ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಝಮ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಸೌಮ್ಯವಾಗಿ ಜನರಿಗೆ ತಿಳಿ ಹೇಳಿ ಮಾರುಕಟ್ಟೆಯನ್ನು ಸ್ಥಗಿತಗೊಳಿಸಬೇಕಿದ್ದ ಪಿಎಸ್ಐ ತರಕಾರಿಗಳನ್ನು ಬೂಟುಗಾಲಿನಲ್ಲಿ ಒದ್ದು ಆಝಮ್ ಅಸಭ್ಯವಾಗಿ ವರ್ತಿಸಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಬಿತ್ತರವಾಗಿತ್ತು.