ಲಿಂಗಸುಗೂರು:ಕೋವಿಡ್ ನಿಯಮಗಳಡಿ ಸಂಕಷ್ಟಕ್ಕೆ ಸಿಲುಕಿರುವ ರೈತರು, ಕೃಷಿ ಕೂಲಿಕಾರರು, ಕಾರ್ಮಿಕರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಜಂಟಿ ಸಮಿತಿಗಳು ಪ್ರತಿಭಟನೆ ನಡೆಸಿದವು.
ಲಿಂಗಸುಗೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ - Lingasugura latest news
ಲಿಂಗಸುಗೂರ ತಾಲೂಕಿನಲ್ಲಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಮಿತಿಗಳು ಜಂಟಿಯಾಗಿ ಪ್ರತಿಭಟನೆ ನಡೆಸಿದವು.
ಸಿಐಟಿಯು, ಕೆ.ಪಿ.ಆರ್.ಎಸ್, ಎ.ಐ.ಎ.ಡಬ್ಲ್ಯೂ.ಯು ಜಂಟಿ ಕ್ರಿಯಾ ಸಮಿತಿಯ ಕಾರ್ಯಕರ್ತರು ತಾಲೂಕಿನಲ್ಲಿ ಪ್ರತಿಭಟನೆ ನಡೆಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿ ಕುಟುಂಬಕ್ಕೆ ಆರು ತಿಂಗಳವರೆಗೆ ಮಾಸಿಕ 7,500 ರೂ. ಕೋವಿಡ್ ಪರಿಹಾರ ನೀಡಬೇಕು. ಉಚಿತ ಕೋವಿಡ್ ಪರೀಕ್ಷೆ ಮತ್ತು ಔಷದೋಪಚಾರ ಹಾಗೂ ನಿರುದ್ಯೋಗಿ ವ್ಯಕ್ತಿಗೆ 10 ಕೆ.ಜಿ ಪಡಿತರ ನೀಡಬೇಕು.
ಉದ್ಯೋಗ ಖಾತ್ರಿ ಕೂಲಿ ಕನಿಷ್ಟ ರೂ. 600ಕ್ಕೆ ಹೆಚ್ಚಿಸಿ, 200 ದಿನಗಳವರೆಗೆ ವಿಸ್ತರಣೆ ಮಾಡುವ ಜೊತೆಗೆ ನಗರ ಪ್ರದೇಶಕ್ಕೂ ವಿಸ್ತರಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.