ರಾಯಚೂರು:ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ' ಗುರುವೈಭವೋತ್ಸವ' ವಿಜಭೃಣೆಯಿಂದ ನಡೆಯುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದೆ. ತುಂಗಾ ತೀರದಲ್ಲಿ ನೆಲೆಸಿರುವ ಶ್ರೀರಾಘವೇಂದ್ರ ಸ್ವಾಮಿಗಳು 402ನೇ ಪಟ್ಟಾಭಿಷೇಕೋತ್ಸವ ಮತ್ತು 428ನೇ ವರ್ಧಂತಿ ಉತ್ಸವ ನಡೆಯುತ್ತಿದ್ದು, ಫೆಬ್ರವರಿ 21ರಿಂದ ಆರಂಭ ಗುರುವೈಭೋತ್ಸವ ಮೂರನೇ ದಿನವಾದ ನಿನ್ನೆ ಅದ್ಧೂರಿಯಾಗಿ ಜರುಗಿತ್ತು.
ಬೆಳಿಗ್ಗೆ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದವನಕ್ಕೆ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜೆಗಳು ನೇರವೇರಿಸಿದ ನಂತರದಲ್ಲಿ, ನವರತ್ನ ಖಚಿತ ಕವಚದಿಂದ ವಿವಿಧ ಬಣ್ಣಗಳ ಹೂಗಳಿಂದ ಅಲಂಕಾರಿಸಲಾಗಿತ್ತು. ಇದಾದ ನಂತರದಲ್ಲಿ ಶ್ರೀಮಠದ ಪೀಠಾಧಿಪತಿ ಸುಭುದೇಂಧ್ರ ತೀರ್ಥರು ಮೂಲ ರಾಮದೇವರ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪೂಜೆ- ಪುನಸ್ಕಾರ ನೇರವೇರಿಸಿದರು.
ಗುರುವೈಭವೋತ್ಸವ ಪ್ರಶಸ್ತಿ:ಸಂಜೆ ಮಠದ ಆವರಣದ ಮುಂಭಾಗದ ಯೋಗೇಂದ್ರ ಸಭಾಮಂಟಪದಲ್ಲಿ ಸಂಗೀತ ಕಾರ್ಯಕ್ರಮ ಜರುಗಿತು. ಅಲ್ಲದೇ ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್ ಎಂದು ಫೇಮಸ್ ಆಗಿರುವ ರಚಿತ್ ರಾಮ್ಗೆ ಗುರುವೈಭವೋತ್ಸವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಜೊತೆಗೆ ನವರಸನಾಯಕ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್, ಆಂಧ್ರ ಶಾಸಕ ಕಟಸನಿ ರಾಮಭೂಪಾಲ್, ಬಳ್ಳಾರಿಯ ಶ್ರೀರಾಘವೇಂದ್ರ ಅಸ್ಟತೋತ್ತರ ಸಂಘದವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವಿಶೇಷ ಪೂಜೆ ಸಲ್ಲಿಸಿದ ರಚಿತಾ ರಾಮ್:ರಚಿತ ರಾಮ್ ಬೆಳಗ್ಗೆಯೇ ಮಂತ್ರಾಲಯಕ್ಕೆ ಆಗಮಿಸಿದ್ದರು. ಬೆಳಗ್ಗೆ ಮಠಕ್ಕೆ ಬಂದು ಪ್ರಾಕಾರದಲ್ಲಿ ಪ್ರದಾಕ್ಷಿಣೆ ಹಾಕಿ, ನಂತರ ರಾಯರ ಮೂಲ ಬೃಂದವನ ದರ್ಶನ ಪಡೆದುಕೊಂಡು ವಿಶೇಷ ಪೂಜೆ ಸಲ್ಲಿಸಿದ್ದರು. ಇದಾದ ನಂತರ ಶ್ರೀಮಠದ ಪೀಠಾಧಿಪತಿಗಳ ಭೇಟಿ ಮಾಡಿ ಆರ್ಶೀವಾದ ಪಡೆದುಕೊಂಡರು.