ಕರ್ನಾಟಕ

karnataka

ETV Bharat / state

ಹಾಲ್​ ಟಿಕೆಟ್​ ನೀಡದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ... ಕಾಲೇಜು ರದ್ದುಗೊಳಿಸುವಂತೆ ವಾಲ್ಮೀಕ ಸಂಘಟನೆ ಆಗ್ರಹ - undefined

ಕಾಲೇಜೊಂದು ವಿದ್ಯಾರ್ಥಿಯೋರ್ವನಿಗೆ ಹಾಲ್​ ಟಿಕೆಟ್​ ನೀಡದೆ ಸತಾಯಿಸಿದ ಕಾರಣಕ್ಕಾಗಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಾವಿಗೆ ಕಾರಣವಾದ ಕಾಲೇಜಿನ ಅನುಮತಿ ರದ್ದುಪಡಿಸುವಂತೆ ವಾಲ್ಮೀಕ ಸಂಘಟನೆ ಒತ್ತಾಯಿಸಿದೆ.

ವಾಲ್ಮೀಕ ಸಂಘಟನೆ

By

Published : May 19, 2019, 3:34 AM IST

ರಾಯಚೂರು: ಹಾಲ್ ಟಿಕೆಟ್ ನೀಡಿದ ಕಾರಣ ವಿದ್ಯಾರ್ಥಿಯೋರ್ವನ ಆತ್ಮಹತ್ಯೆ ಕಾರಣವಾದ‌‌ ಖಾಸಗಿ ಕಾಲೇಜಿನ ಅನುಮತಿ ರದ್ದುಪಡಿಸುವಂತೆ ಹೈದರಾಬಾದ್-ಕರ್ನಾಟಕ ಪ್ರದೇಶ ವಾಲ್ಮೀಕ ಸಂಘಟನೆ ಒತ್ತಾಯಿಸಿದೆ.

ರಾಯಚೂರಿನ ಪ್ರತಿಕಾಭವನದಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ಮಾನವಿ ಪಟ್ಟಣದ ಲೋಯೊಲೋ ಕಾಲೇಜಿನಲ್ಲಿ ಬಿ.ಕಾಂ. ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿ ಹಾಲ್ ಟಿಕೆಟ್ ನೀಡದಿರುವುದಕ್ಕೆ ಮನನೊಂದು ನೇಣು ಬಿಗಿದು ಸಾವಿಗೆ ಶರಣಾಗಿದ್ದಾನೆ.

ಕಾಲೇಜು ಪರವಾನಿಗೆ ರದ್ದಿಗೆ ವಾಲ್ಮೀಕ ಸಂಘಟನೆ ಆಗ್ರಹ

ಆದ್ರೆ ಈ ಪ್ರಕರಣವನ್ನ ಮಾನವಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವೆಂದು ಪ್ರಕರಣವನ್ನ ದಾಖಲಿಸಲಾಗಿದೆ. ಆದ್ರೆ ವಿದ್ಯಾರ್ಥಿ ಸಾವಿಗೆ ಕಾಲೇಜು ನೇರ ಕಾರಣವಾಗಿರುತ್ತದೆ. ವಿದ್ಯಾರ್ಥಿ ಹಾಜರಾತಿ ಕಡಿಮೆ ಇರುವ ಕಾರಣ ಹಾಲ್ ಟಿಕೆಟ್ ಬಂದಿಲ್ಲ ಎಂದು ಕಾಲೇಜು ಹೇಳುತ್ತಿದೆ. ಆದ್ರೆ ಹಾಲ್ ಟಿಕೆಟ್‌ನ್ನು ವಿವಿಯಿಂದ ಕಳುಹಿಸಲಾಗುತ್ತದೆ. ಹಾಜರಾತಿ ಕಡಿಮೆಯಿದ್ದರೆ ಹಾಲ್ ಟಿಕೆಟ್ ಬರುತ್ತದೆ ಎನ್ನುವುದು ಒಂದು ಕಡೆಯಾದ್ರೆ, ಒಂದು ಬಾರಿ ಬಂದ ಹಾಲ್ ಟಿಕೆಟ್ ವಿದ್ಯಾರ್ಥಿಗೆ ನೀಡಬೇಕು. ಆದ್ರೆ ಕಾಲೇಜು ಆಡಳಿತ ನಿರಾಕರಣೆ ಮಾಡಿದೆ ಎಂದು ದೂರಿದ್ದಾರೆ.

ಹೀಗಾಗಿ ಕೂಡಲೇ ಇಂತಹ ಕಾಲೇಜು ಮಾನ್ಯತೆ ರದ್ದುಗೊಳಿಸಬೇಕು. ವಿದ್ಯಾರ್ಥಿ ಸಾವಿಗೆ ಕಾರಣವಾದವರಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

For All Latest Updates

TAGGED:

ABOUT THE AUTHOR

...view details