ರಾಯಚೂರು: ನಾರಾಯಣಪುರ ಬಲದಂಡೆ ನಾಲಾ ಯೋಜನೆ(ಎನ್‌ಆರ್‌ಬಿಸಿ)ಯಿಂದ 5ಎ ಕಾಲುವೆ ನಿರ್ಮಾಣಕ್ಕೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟದ ಬಿಸಿ ಗ್ರಾಮ ಪಂಚಾಯತ್ ಚುನಾವಣೆ ಮೇಲೂ ಬೀರಿದೆ.
ಜಿಲ್ಲೆಯ ಮಸ್ಕಿ ತಾಲೂಕಿನ ಅಂಕುಶದೊಡ್ಡಿ, ವಟಗಲ್, ಪಾಮನಕಲ್ಲೂರು, ಅಮೀನಗಡ್ಡ ನಾಲ್ಕು ಗ್ರಾಮ ಪಂಚಾಯಿತಿಗಳ 74 ಸ್ಥಾನಗಳಿಗೆ ನಾಮಪತ್ರ ಸಲ್ಲಿಸದೆ ಚುನಾವಣೆ ಬಹಿಷ್ಕರಿಸಿದ್ದಾರೆ.
ಇದನ್ನು ಓದಿ: ಡಿವೈಎಸ್ಪಿ ಲಕ್ಷ್ಮಿ ಸಾವು ಪ್ರಕರಣ.. ಮರಣೋತ್ತರ, ಎಫ್ಎಸ್ಎಲ್ ವರದಿಯಲ್ಲಿ ಅಡಗಿದೆ ಆರೋಪಿಗಳ ಭವಿಷ್ಯ
ಎನ್‌ಆರ್‌ಬಿಸಿ ಕಾಲುವೆ ಮೂಲಕ ಮಸ್ಕಿ ತಾಲೂಕಿನ ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯುತ್ತದೆ. 5ಎ ಕಾಲುವೆ ಯೋಜನೆ ಅನುಷ್ಠಾನ ಕಳೆದ 12 ವರ್ಷಗಳಿಂದ ಹೋರಾಟ ಮಾಡಲಾಗುತ್ತದೆ. ಆದ್ರೆ ಇದುವರೆಗೂ ಯೋಜನೆ ಜಾರಿಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ಮುಂದಾಗಿದ್ದು, ಚುನಾವಣೆ ಬಹಿಷ್ಕರಿಸಿದ್ದಾರೆ.
ಮಸ್ಕಿ ಗ್ರಾ.ಪಂ ಚುನಾವಣೆ ಬಹಿಷ್ಕಾರ ಇದರಿಂದ ಸರ್ಕಾರ ಎಚ್ಚೆತ್ತುಕೊಂಡು 5ಎ ಕಾಲುವೆ ನಿರ್ಮಾಣ ಯೋಜನೆ ಜಾರಿಗೊಳಿಸಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಮಸ್ಕಿ ಬೈ ಎಲೆಕ್ಷನ್ ಬಹಿಷ್ಕಾರಿಸಲಾಗುವುದು ಎಂದು ಹೋರಾಟಗಾರರು ಎಚ್ಚರಿಸಿದರು.