ಕರ್ನಾಟಕ

karnataka

ETV Bharat / state

ಪ್ರವಾಹದಲ್ಲಿ ತೇಲಿಬಂದ ಶವ : ಸಂಬಂಧಿಕರಿಗಾಗಿ ತೀವ್ರ ಹುಡುಕಾಟ - Unknown deadbody found

ಮಳೆಯಿಂದ ಎಲ್ಲ ಕಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನಾರಾಯಣಪುರ ಅಣೆಕಟ್ಟೆಯ ಹಿನ್ನೀರಿನಲ್ಲಿ ಶವವೊಂದು ಪತ್ತೆಯಾಗಿದೆ.

unknown-deadbody-found-in-narayanapura-dam-at-raichur
ಪ್ರವಾಹದಲ್ಲಿ ತೇಲಿಬಂದ ಶವ

By

Published : Aug 8, 2020, 10:26 AM IST

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಚಿತ್ತಾಪುರ ಗ್ರಾಮದ ಬಳಿಯ ನಾರಾಯಣಪುರ ಅಣೆಕಟ್ಟೆ ಹಿನ್ನೀರಿನಲ್ಲಿ ಶವವೊಂದು ಪತ್ತೆಯಾಗಿದೆ.

ಮೀನುಗಾರರು ಮತ್ತು ರೈತರು ನದಿಯ ಬಳಿ ಹೋದ ವೇಳೆ ಪ್ರವಾಹದಲ್ಲಿ ತೇಲಿಬಂದ ಅನಾಥ ಶವ ಕಾಣಿಸಿಕೊಂಡಿದೆ. ತಕ್ಷಣವೇ ವಾಟ್ಸ್​ಆ್ಯಪ್​ ಗ್ರೂಪ್​​​​ಗಳಿಗೆ ಹಾಕಿ ಗುರುತಿಸಿ ಸಂಬಂಧಿಕರಿಗೆ ಮಾಹಿತಿ ತಲುಪಿಸಲು ಮನವಿ ಮಾಡಿಕೊಂಡಿದ್ದಾರೆ.

ನಾರಾಯಣಪುರ ಅಣೆಕಟ್ಟೆ ಜಲಾನಯನ ಪ್ರದೇಶದಲ್ಲಿ ಪ್ರವಾಹ ಹೆಚ್ಚಿದ್ದು, ಕೃಷ್ಣಾ, ಘಟಪ್ರಭಾ, ಮಲಪ್ರಭ ನದಿಗಳಲ್ಲಿ ಪ್ರವಾಹ ಹೆಚ್ಚಾಗಿದೆ.

ಘಟನಾ ಸ್ಥಳಕ್ಕೆ ಲಿಂಗಸುಗೂರು ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ವಿಚಾರಣೆ ನಂತರವೇ ಶವದ ಗುರುತು, ಸಂಬಂಧ, ಸಾವಿಗೆ ಕಾರಣ ತಿಳಿದು ಬರಲಿದೆ.

ABOUT THE AUTHOR

...view details