ರಾಯಚೂರು: ನಗರದ ವಿವಿಧೆಡೆ ಅನಧಿಕೃತವಾಗಿ ಅಳವಡಿಸಲಾಗಿದ್ದ ಫ್ಲೆಕ್ಸ್, ಬ್ಯಾನರ್, ಬಂಟಿಗ್ಸ್, ಬೋರ್ಡ್ಗಳನ್ನು ನಗರಸಭೆ ಸಿಬ್ಬಂದಿ ಕೊನೆಗೂ ಇಂದು ತೆರವುಗೊಳಿಸಿದರು.
ರಾಯಚೂರು: ಅನಧಿಕೃತ ಜಾಹೀರಾತು ಫಲಕ ತೆರವುಗೊಳಿಸಿದ ನಗರಸಭೆ
ಸಾರ್ವಜನಿಕರ ದೂರು ಬಂದ ಹಿನ್ನೆಲೆ, ರಸ್ತೆಯ ಪಕ್ಕದಲ್ಲಿರುವ ಫ್ಲೆಕ್ಸ್, ಬ್ಯಾನರ್, ಬಂಟಿಗ್ಸ್, ಬೋರ್ಡ್ಗಳನ್ನು ಇಂದು ತೆರವುಗೊಳಿಸಲಾಯಿತು.
ನಗರದಲ್ಲಿ ಫ್ಲೆಕ್ಸ್ ಹಾವಳಿ ಹೆಚ್ಚಾಗಿರುವ ಕುರಿತು ಸಾರ್ವಜನಿಕರ ದೂರು ಬಂದ ಹಿನ್ನೆಲೆ ನಗರಸಭೆ ಸಿಬ್ಬಂದಿ ನಗರದ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಬಾಬು ಜಗಜೀವನರಾಮ್ ವೃತ್ತದಲ್ಲಿ ಅನಧಿಕೃತವಾಗಿ ಅಳವಡಿಸಲಾಗಿದ್ದ ಸುಮಾರು 20ಕ್ಕೂ ಅಧಿಕ ಖಾಸಗಿ ಜಾಹೀರಾತು ಫಲಕಗಳನ್ನು ಮೊದಲನೆಯ ಹಂತದಲ್ಲಿ ತೆರವುಗೊಳಿಸಿದರು.
ನಗರದಲ್ಲಿ 100ಕ್ಕೂ ಅಧಿಕ ಖಾಸಗಿ ಜಾಹೀರಾತು ಫಲಕಗಳಿದ್ದು, ರಸ್ತೆಯ ಪಕ್ಕದಲ್ಲಿರುವ ಸಣ್ಣ-ಸಣ್ಣ ಫಲಕಗಳನ್ನು ಮಾತ್ರ ಇಂದು ತೆರವುಗೊಳಿಸಿದೆ. ಮುಂದಿನ ದಿನಗಳಲ್ಲಿ ರಸ್ತೆಯ ಪಕ್ಕದಲ್ಲಿರುವ ಕಟ್ಟಡ ಸೇರಿದಂತೆ ದೊಡ್ಡ ದೊಡ್ಡ ಫಲಕಗಳನ್ನು ನಗರಸಭೆ ತೆರವುಗೊಳಿಸಲು ಕಾರ್ಯ ಯೋಜನೆ ಹಾಕಿಕೊಂಡಿದೆ ಎನ್ನಲಾಗುತ್ತಿದೆ.