ರಾಯಚೂರು :ನೂತನ ರಾಯಚೂರು ವಿಶ್ವವಿದ್ಯಾಲಯ ಯುಜಿಸಿಯ ಮಾನ್ಯತೆ ಪಡೆದ ದೇಶದ ವಿವಿಧ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಅಧಿಕೃತವಾಗಿ ಸೇರ್ಪಡೆಗೊಂಡಿದೆ.
2021ರ ಜುಲೈ 9ರಂದು ಯುಜಿಸಿಯ ಅಧೀನ ಕಾರ್ಯದರ್ಶಿ ಡಾ.ನರೇಶ್ ಕುಮಾರ್ ಶರ್ಮಾ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವರಿಗೆ ಪತ್ರ ಬರೆದಿದ್ದಾರೆ.
ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವರಿಗೆ ಯುಜಿಸಿ ಬರೆದಿರುವ ಪತ್ರ ಯುಜಿಸಿ ಕಾಯ್ದೆ 1956ರ ಭಾಗ 22 ಹಾಗೂ 2(ಎಫ್) ನಿಯಮದಂತೆ ರಾಯಚೂರು ವಿವಿ ಸ್ಥಾಪನೆಯಾಗಿದೆ. ಈಗ ಯುಜಿಸಿಯ ವೆಬ್ಸೈಟ್ನಲ್ಲಿ ರಾಯಚೂರು ವಿವಿಗೆ ಸ್ಥಾನ ಸಿಗುವ ಮೂಲಕ ಅಭಿವೃದ್ಧಿಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.
ಈ ಕುರಿತು ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ. ಯುಜಿಸಿ ಶೈಕ್ಷಣಿಕ ಹಾಗೂ ಆರ್ಥಿಕ ಸಹಾಯ ಪಡೆದು ನೂತನ ವಿವಿಯನ್ನ ಅಭ್ಯುದಯದೆಡೆಗೆ ಮುನ್ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಓದಿ: ಮಂಗಳೂರಿನಲ್ಲಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ: ಕೊಂಕಣ ಮಾರ್ಗ ತಾತ್ಕಾಲಿಕ ಬಂದ್!
ರಾಜ್ಯ ಸರ್ಕಾರ 2020 ಜುಲೈ 27ರಂದು ರಾಯಚೂರು ವಿವಿಗೆ ಅಧಿಸೂಚನೆ ಹೊರಡಿಸಿದೆ. ಕೋವಿಡ್-19 ಕಾರಣಾಂತರಗಳಿಂದ ತಡವಾಗಿದ್ದರೂ ರಾಯಚೂರು ವಿವಿ ವರ್ಷದಲ್ಲೇ ಯುಜಿಸಿ ಮಾನ್ಯತೆ ಸಿಕ್ಕಿದ್ದನ್ನು ಸ್ಮರಿಸಬಹುದಾಗಿದೆ.