ರಾಯಚೂರು:ಸೆಲ್ಫಿ ಗೀಳಿನಿಂದ ಕಾಲುವೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಕಲಮಲಾ ಗ್ರಾಮದ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಡೆದಿದೆ.
ಪಿಯುಸಿ ವಿದ್ಯಾರ್ಥಿಗಳಾದ ಸುಜಿತ್ ಹಾಗೂ ವೈಭವ್ ಮೃತರು. ಕಲಮಲಾ ಗ್ರಾಮದ ಹೊರವಲಯದ ದೇವದುರ್ಗ ರಸ್ತೆ ಮಾರ್ಗದಲ್ಲಿ ಬರುವ ತುಂಗಭದ್ರಾ ಎರಡದಂಡೆ ನಾಲೆಗೆ ವೀಕೆಂಡ್ ಎಂಜಾಯ್‌ಮೆಂಟ್‌ಗಾಗಿ ನಾಲ್ವರು ವಿದ್ಯಾರ್ಥಿಗಳ ತಂಡ ಸ್ನಾನಕ್ಕೆ ತೆರಳಿದ್ದಾರೆ. ಈ ವೇಳೆ ನಾಲೆಯಲ್ಲಿ ಸೆಲ್ಫಿ ತೆಗೆಯುವಾಗ ಸುಜಿತ್ ಹಾಗೂ ವೈಭವ್ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಇನ್ನುಳಿದ ನಾಗೇಂದ್ರ ಹಾಗೂ ತರುಣ್ ಈಜಿ ದಡ ಸೇರಿದ್ದಾರೆ. ಇವರು ರಾಯಚೂರು ನಗರದ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದರು ಎನ್ನಲಾಗುತ್ತಿದೆ.
ಕಾಲುವೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವು ಘಟನಾ ನಡೆದ ಸ್ಥಳದಿಂದ 200 ಮೀಟರ್ ದೂರದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ರಾಯಚೂರು ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲೆಯಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:80 ವರ್ಷ ಹಳೆಯ ಎರಡಂತಸ್ತಿನ ಕಟ್ಟಡ ಕುಸಿತ: ಮಗು ಸೇರಿ ಮೂವರ ಸಾವು