ರಾಯಚೂರು:ಸಂಗೀತ ಕ್ಷೇತ್ರದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಾ.ಮುದ್ದಮೋಹನ್ ಹಾಗೂ ಜಾನಪದ ಕ್ಷೇತ್ರದಿಂದ ಉಸ್ಮಾನಸಾಬ್ ಖಾದರ್ ಸಾಬ್ ಗೆ ಪ್ರಶಸ್ತಿ ಗರಿ ಲಭಿಸಿದೆ.
ಡಾ.ಮುದ್ದುಮೋಹನ್:ಡಾ.ಮುದ್ದುಮೋಹನ್ರಾಯಚೂರು ಜಿಲ್ಲೆಯ ಮಸ್ಕಿ ಸಮೀಪದ ಬಳಗಾನೂರು ಗ್ರಾಮದ ಮೂಲದವರಾಗಿದ್ದಾರೆ. ಇವರ ತಾಯಿ ಸಂಗೀತದ ವಿಶೇಷ ಆಸಕ್ತಿ ಹೊಂದಿರವ ಹಿನ್ನಲೆಯಿಂದಾಗಿ ಮನೆಯಲ್ಲಿ ಹಾಡುತ್ತಿದ್ದರು. ಹೀಗಾಗಿ ಬಾಲ್ಯದಿಂದ ಸಂಗೀತ ಆಸಕ್ತಿಯನ್ನ ರೂಢಿಸಿಕೊಂಡು ಸಂಗೀತ ಲೋಕಕ್ಕೆ ಕಾಲಿಟ್ಟರು. ತಮ್ಮ ವಿಶೇಷ ಕಂಠ ಸಿರಿಯ ಮೂಲಕ ಸಂಗೀತ ಕ್ಷೇತ್ರದಲ್ಲಿ ಹೆಸರುಗಳಿಸಿ, ದೇಶ, ವಿದೇಶಗಳಲ್ಲಿ ತಮ್ಮ ಚಾಪು ಮೂಡಿಸಿದ್ದಾರೆ. ಇನ್ನೂ ಇವರ ತಂದ ನಿಜಾಂ ಆಡಳಿತಾವಧಿಯಲ್ಲಿ ಅಧಿಕಾರಿಯಾಗಿದ್ದ ಹಿನ್ನೆಲೆ, ಶಿಕ್ಷಣವನ್ನ ಕಲಿತು ಐಎಎಸ್ ಹುದ್ದೆ ಅಲಂಕಾರಿಸಿದ್ದರು. ಇದೀಗ ಸಂಗೀತ ಕ್ಷೇತ್ರದಿಂದ ರಾಜ್ಯೋತ್ಸವದ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.