ರಾಯಚೂರು:ಜಿಲ್ಲೆಯ ಮುದಗಲ್ಲ ಮತ್ತು ಲಿಂಗಸುಗೂರಿನ ಪರೀಕ್ಷಾ ಕೇಂದ್ರದಲ್ಲಿ ಕ್ವಾರಂಟೈನ್ ನಲ್ಲಿದ ಇಬ್ಬರು ವಿದ್ಯಾರ್ಥಿಗಳು ಪಿಯು ಪರೀಕ್ಷೆ ಬರೆದಿದ್ದಾರೆ.
ಕರಡಕಲ್ಲ ಕ್ವಾರಂಟೈನ್ ಕೇಂದ್ರದಲ್ಲಿದ್ದ ವಿದ್ಯಾರ್ಥಿ ಮುದಗಲ್ಲ ಸರ್ಕಾರಿ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಮತ್ತು ಸರ್ಜಾಪುರದ ಕ್ವಾರಂಟೈನದಲ್ಲಿದ್ದ ವಿದ್ಯಾರ್ಥಿನಿ ಲಿಂಗಸುಗೂರು ಸರ್ಕಾರಿ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ ಕುಳಿತು ಪರೀಕ್ಷೆ ಬರೆದಿರುವುದನ್ನು ಕೇಂದ್ರದ ಮುಖ್ಯಸ್ಥರು ಖಚಿತಪಡಿಸಿದ್ದಾರೆ.
ತಾಲೂಕಿನ ಆರು ಪರೀಕ್ಷಾ ಕೇಂದ್ರಗಳಲ್ಲಿ ನೋಂದಣಿ ಆಗಿದ್ದ 3314 ಮಕ್ಕಳ ಪೈಕಿ 3099 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, 215 ಮಕ್ಕಳು ಗೈರಾಗಿದ್ದರು ಎಂದು ನೋಡಲ್ ಅಧಿಕಾರಿ ಮುರುಘೇಂದ್ರಪ್ಪ ತಿಳಿಸಿದ್ದಾರೆ.
ಪಿಯುಸಿ ಪರೀಕ್ಷೆ ಬರೆದ ಕ್ವಾರಂಟೈನ್ ನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು - Lingasuguru puc exam
ಕ್ವಾರಂಟೈನ್ ನಲ್ಲಿ ಇದ್ದ ರಾಯಚೂರು ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಯನ್ನು ಬರೆದಿದ್ದಾರೆ.
![ಪಿಯುಸಿ ಪರೀಕ್ಷೆ ಬರೆದ ಕ್ವಾರಂಟೈನ್ ನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು Two quarantined students wrote exam in raichuru](https://etvbharatimages.akamaized.net/etvbharat/prod-images/768-512-07:07:44:1592487464-kn-lgs-04-puc-exam-kac10020-18062020190119-1806f-1592487079-24.jpg)
Two quarantined students wrote exam in raichuru
ಈ ಬಾರಿ ಬೇರೆ ಬೇರೆ ಕಡೆ ಅಧ್ಯಯನಕ್ಕೆ ಹೋಗಿದ್ದ ಮಕ್ಕಳಿಗೆ ಸ್ಥಳೀಯ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದರಿಂದ 176 ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿತ್ತು.
ನೂಕು ನುಗ್ಗಲು:ಕೊರೊನಾ ವೈರಸ್ ಹರಡದಂತೆ ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ ಧರಿಸುವುದು ಸೇರಿದಂತೆ ಸಾಕಷ್ಟು ಮುಂಜಾಗ್ರತೆ ಕೈಗೊಳ್ಳಲಾಗಿತ್ತು. ಆದರೆ ಒಂದೆರಡು ಕೇಂದ್ರಗಳ ಮುಂಭಾಗ ವಿದ್ಯಾರ್ಥಿಗಳು ನೂಕು ನುಗ್ಗಲು ಮಧ್ಯೆಯೇ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದು ಕಂಡು ಬಂತು.