ಕರ್ನಾಟಕ

karnataka

ETV Bharat / state

ರಿಮ್ಸ್​ನಲ್ಲಿ ಪಿಡಿಯಾಟ್ರಿಕ್​​, ಅರ್ಥೋಪೆಡಿಕ್​​ ಸ್ನಾತಕೋತ್ತರ ಕೋರ್ಸ್​ಗೆ ಗ್ರೀನ್​​​ ಸಿಗ್ನಲ್​​​​ - ರಿಮ್ಸ್​ನಲ್ಲಿ ಪಿಡಿಯಾಟ್ರಿಕ್, ಅರ್ಥೋಪೆಡಿಕ್ ಸ್ನಾತಕೋತ್ತರ ಕೋರ್ಸ್​

ಇಲ್ಲಿನ ರಿಮ್ಸ್​ ವೈದ್ಯಕೀಯ ಕಾಲೇಜಿನಲ್ಲಿ 2020-21ನೇ ಶೈಕ್ಷಣಿಕ ವರ್ಷದಿಂದ ಕ್ಲಿನಿಕಲ್ ಪಿಡಿಯಾಟ್ರಿಕ್ ಮತ್ತು ಅರ್ಥೋಪೆಡಿಕ್ ವಿಭಾಗದ ಎರಡು ಸ್ನಾತಕೋತ್ತರ ಕೋರ್ಸ್​ಗಳ ಪ್ರಾರಂಭಕ್ಕೆ ಗ್ರಿನ್ ಸಿಗ್ನಲ್ ದೊರೆತಿದೆ.

two pg courses start in RIMS
ಸ್ನಾತಕೋತ್ತರ ಕೋರ್ಸ್​ಗೆ ಗ್ರೀನ್​ ಸಿಗ್ನಲ್​

By

Published : Nov 26, 2019, 6:02 PM IST

ರಾಯಚೂರು:ಇಲ್ಲಿನ ರಿಮ್ಸ್​ ವೈದ್ಯಕೀಯ ಕಾಲೇಜಿನಲ್ಲಿ 2020-21ನೇ ಶೈಕ್ಷಣಿಕ ವರ್ಷದಿಂದ ಕ್ಲಿನಿಕಲ್ ಪಿಡಿಯಾಟ್ರಿಕ್ ಮತ್ತು ಅರ್ಥೋಪೆಡಿಕ್ ವಿಭಾಗದ ಎರಡು ಸ್ನಾತಕೋತ್ತರ ಕೋರ್ಸ್​ಗಳ ಪ್ರಾರಂಭಕ್ಕೆ ಗ್ರಿನ್ ಸಿಗ್ನಲ್ ದೊರೆತಿದೆ. ಮೆಡಿಸಿನ್ ವಿಭಾಗದಲ್ಲಿ ಪಿಜಿ ಆರಂಭಕ್ಕೂ ಅನುಮತಿ ಸಿಗುವ ಸಾಧ್ಯತೆಗಳು ಹೆಚ್ಚಾಗಿದ್ದು, ರಿಮ್ಸ್​​​ನಲ್ಲಿ ಸದ್ಯ ಇರುವ ಸೌಲಭ್ಯಗಳನ್ನು ಪರಿಗಣಿಸಿ ಎಂಸಿಐ ನೂತನವಾಗಿ ಎರಡು ಪಿಜಿ ಕೋರ್ಸ್ ಆರಂಭಕ್ಕೆ ಅನುಮತಿ ನೀಡಿದೆ. ಇದಕ್ಕೆ ತಕ್ಕಂತೆ ಪ್ರಸ್ತುತ ಇರುವ 500 ಹಾಸಿಗೆ ಸಾಮರ್ಥ್ಯದ ರಿಮ್ಸ್ ಆಸ್ಪತ್ರೆಯನ್ನು 800 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ 300 ಹಾಸಿಗೆಯ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ.

ಸ್ನಾತಕೋತ್ತರ ಕೋರ್ಸ್​ಗೆ ಗ್ರೀನ್​ ಸಿಗ್ನಲ್​

ಕಳೆದ ಶೈಕ್ಷಣಿಕ ವರ್ಷದಿಂದ ಸಂಸ್ಥೆಯಲ್ಲಿ ಎಂಬಿಬಿಎಸ್ ಪ್ರವೇಶ ಸಾಮರ್ಥ್ಯವನ್ನು 100 ವಿದ್ಯಾರ್ಥಿಗಳಿಂದ 150ಕ್ಕೆ ಏರಿಕೆ ಮಾಡಲಾಗಿದ್ದು, ಈಗಾಗಲೇ ಕಾಲೇಜಿನಲ್ಲಿನ 6 ವಿಭಾಗಗಳಲ್ಲಿ ಪ್ರೀ ಕ್ಲಿನಿಕಲ್ ಹಾಗೂ ಪ್ಯಾರಾ ಕ್ಲಿನಿಕಲ್ ಪಿಜಿಯಲ್ಲಿ ತಲಾ ಎರಡು ಸೀಟುಗಳ ಪ್ರವೇಶ ನೀಡಲಾಗಿದೆ. ಕ್ಲಿನಿಕಲ್ ವಿಭಾಗದಲ್ಲಿ ಮೊದಲ ಬಾರಿಗೆ 2 ಪಿಜಿ ಕೋರ್ಸ್ ಪ್ರಾರಂಭಿಸಲಾಗುತ್ತಿದೆ. ಕ್ಲಿನಿಕಲ್ ಪಿಜಿ ಕೋರ್ಸ್ ಆರಂಭಕ್ಕೆ ಬೇಕಾದ ಯಂತ್ರೋಪಕರಣ ಖರೀದಿಗೆ ಸಂಬಂಧಿಸಿದಂತೆ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ತರಗತಿ ನಡೆಸಲು ಕೊಠಡಿ, ಅಗತ್ಯ ಪ್ರಯೋಗಾಲಯ ತಯಾರಿ ನಡೆಸಲಾಗುತ್ತಿದ್ದು, ಬೋಧನಾ ಸಿಬ್ಬಂದಿಯನ್ನು ನೇರ ಸಂದರ್ಶನ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ರಿಮ್ಸ್ ನಿರ್ದೇಶಕ ಡಾ. ಬಸವರಾಜ ಪಿರಾಪುರ ಹೇಳಿದ್ದಾರೆ.

ಪಿಡಿಯಾಟ್ರಿಕ್ ಹಾಗೂ ಅರ್ಥೋಪೆಡಿಕ್ ವಿಭಾಗದಲ್ಲಿ ತಲಾ 2 ಸೀಟುಗಳ ಪ್ರವೇಶಕ್ಕೆ ಮಾತ್ರ ಅನುಮತಿ ಸಿಕ್ಕಿದೆ. ಕ್ಲಿನಿಕಲ್ ಮೆಡಿಸಿನ್ ವಿಭಾಗದ ಪಿಜಿ ಆರಂಭಕ್ಕೆ ಎಂಸಿಐನಿಂದ ಸಮ್ಮತಿ ಸಿಗುವ ಆಶಾಭಾವನೆ ಇದೆ. ಇದರಿಂದ ಈ ವಿಭಾಗದಲ್ಲಿ 4 ಸೀಟ್​ಗಳ ಪ್ರವೇಶಕ್ಕೆ ಅನುಮತಿ ದೊರಕಲಿದೆ. ಎಂಬಿಬಿಎಸ್ ಸೀಟ್​​ಗಳ ಸಂಖ್ಯೆ ಏರಿಕೆಯ ಜತೆಯಲ್ಲಿ ಕ್ಲಿನಿಕಲ್ ಸ್ನಾತಕೋತ್ತರ ಕೋರ್ಸ್ ಪ್ರಾರಂಭಕ್ಕೆ ಅನುವು ಮಾಡಿಕೊಟ್ಟಿರುವುದು ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಿಲಿದೆ.

ABOUT THE AUTHOR

...view details