ರಾಯಚೂರು:ಸಿಡಿಲು ಬಡಿದು ಎರಡು ಎತ್ತುಗಳು ಸಾವನ್ನಪ್ಪಿರುವ ಘಟನೆ ಲಿಂಗಸುಗೂರು ತಾಲೂಕಿನ ಗುರುಗುಂಟಾ ಹೋಬಳಿ ತೊಗರೇರದೊಡ್ಡಿಯಲ್ಲಿ ನಡೆದಿದೆ.
ಲಿಂಗಸುಗೂರಿನಲ್ಲಿ ಸಿಡಿಲು ಬಡಿದು 2 ಎತ್ತುಗಳು ಸಾವು - Ox death
ರಾಯಚೂರಿನ ಲಿಂಗಸುಗೂರು ಬಳಿಯ ಗುರುಗುಂಟಾ ಹೋಬಳಿ ತೊಗರೇರದೊಡ್ಡಿಯಲ್ಲಿ ಸಿಡಿಲು ಬಡಿದು ಎರಡು ಎತ್ತುಗಳು ಸಾವನ್ನಪ್ಪಿವೆ.
ಲಿಂಗಸುಗೂರಿನಲ್ಲಿ ಸಿಡಿಲು ಬಡಿದು 2 ಎತ್ತುಗಳು ಸಾವು
ನಿನ್ನೆ ರಾತ್ರಿ ಘಟನೆ ಸಂಭವಿಸಿದ್ದು, ಮೊಹಿನುದ್ದೀನ್ ಎಂಬವರಿಗೆ ಸೇರಿದ 2 ಎತ್ತುಗಳು ಸಾವನ್ನಪ್ಪಿವೆ. ಜಮೀನಿನಲ್ಲಿ ಕಟ್ಟಿ ಹಾಕಿದ್ದ ಬೆಲೆ ಬಾಳುವ ಎತ್ತುಗಳ ಸಾವಿನಿಂದ ಅಪಾರ ನಷ್ಟವಾಗಿದ್ದು, ಮಾಲೀಕರು ಕಂಗಾಲಾಗಿದ್ದಾರೆ.
ಘಟನೆ ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿ, ಪೊಲೀಸರು ಹಾಗೂ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.