ಕರ್ನಾಟಕ

karnataka

ETV Bharat / state

ಕಾಲು ಜಾರಿ ಕಾಲುವೆಗೆ ಬಿದ್ದು ಇಬ್ಬರು ಬಾಲಕಿಯರ ಸಾವು - ಮಿರ್ಜಾಪುರ ಗ್ರಾಮದಲ್ಲಿ ಇಬ್ಬರು ಬಾಲಕಿಯರ ಸಾವು

ಕಾಲುವೆಯಲ್ಲಿ ಇಬ್ಬರು ಬಾಲಕಿಯರು ಆಟವಾಡಲು ತೆರಳಿದ್ದ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಈ ವೇಳೆ, ಈಜಲು ಬಾರದೆ ಇಬ್ಬರೂ ಮೃತಪಟ್ಟಿದ್ದಾರೆ.

ಕಾಲು ಜಾರಿ ಕಾಲುವೆಗೆ ಬಿದ್ದು ಇಬ್ಬರು ಬಾಲಕಿಯರ ಸಾವು
ಕಾಲು ಜಾರಿ ಕಾಲುವೆಗೆ ಬಿದ್ದು ಇಬ್ಬರು ಬಾಲಕಿಯರ ಸಾವು

By

Published : Apr 26, 2022, 7:46 AM IST

ರಾಯಚೂರು: ಕಾಲುವೆಯಲ್ಲಿ ಆಟವಾಡಲು ತೆರಳಿದ್ದ ವೇಳೆ ಇಬ್ಬರು ಬಾಲಕಿಯರು ನೀರಿಗೆ ಜಾರಿಬಿದ್ದು ಸಾವಿಗೀಡಾಗಿರುವ ವಿದ್ರಾವಕ ಘಟನೆ ಜಿಲ್ಲೆಯ ಮಿರ್ಜಾಪುರ ಗ್ರಾಮದಲ್ಲಿ ಈ ಸಂಭವಿಸಿದೆ. ಗ್ರಾಮದಲ್ಲಿ ಬಳಿ ಹಾದು ಹೋಗಿರುವ ಆರ್‌ಡಿಎಸ್‌(ರಾಜಲಬಂಡಾ ನಾಲೆ ಯೋಜನೆ)ಕಾಲುವೆಯಲ್ಲಿ ಇಬ್ಬರು ಬಾಲಕಿಯರು ಆಟವಾಡಲು ತೆರಳಿದ್ದ ವೇಳೆ ಕಾಲು ಜಾರಿ ಬಿದ್ದಿದ್ದಾರೆ.

ಈ ವೇಳೆ ಈಜಲು ಬಾರದೆ ಇಬ್ಬರೂ ಮೃತಪಟ್ಟಿದ್ದಾರೆ. 8 ನೇ ತರಗತಿ ಓದುತ್ತಿದ್ದ ಇಂದು(14), ಏಳನೇ ತರಗತಿ ಓದುತ್ತಿದ್ದ ಸುಜಾತ(13) ಮೃತ ಬಾಲಕಿಯರು. ಘಟನಾ ಸ್ಥಳಕ್ಕೆ ಇಡಪಾನೂರು ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ. ನೀರಲ್ಲಿ ಬಿದ್ದ ಬಾಲಕಿಯರ ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

For All Latest Updates

TAGGED:

ABOUT THE AUTHOR

...view details