ರಾಯಚೂರು:ಕೂಲಿ ಕೆಲಸಕ್ಕೆ ಗುಳೆ ಹೋಗಿದ್ದ ರಾಯಚೂರು ತಾಲೂಕಿನ ಇಬ್ಬರು ಹೆಣ್ಣು ಮಕ್ಕಳು ನೀರು ಪಾಲಾಗಿರುವ ಘಟನೆ ಆಂಧ್ರದ ಪ್ರಕಾಶಂ ಜಿಲ್ಲೆಯ ಇಂಕೊಳ್ಳು ಮಂಡಲದ ದುದ್ದಕೂರು ಗ್ರಾಮದಲ್ಲಿ ನಡೆದಿದೆ.
ಗುಳೆ ಹೋಗಿದ್ದ ಇಬ್ಬರು ಯುವತಿಯರು ನೀರು ಪಾಲು - ರಾಯಚೂರಿನಿಂದ ಆಂಧ್ರಕ್ಕೆ ತೆರಳಿದ್ದ ಕಾರ್ಮಿಕರು ಸಾವು
ರಾಯಚೂರು ತಾಲೂಕಿನ ಜುಲಮಗೇರಾದ ಇಬ್ಬರು ಯುವತಿಯರು ಬಟ್ಟೆ ತೊಳೆಯಲು ಹೋಗಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಉಷಾ(17), ಮುನಿಯಾ(18) ಮೃತಪಟ್ಟ ದುರ್ದೈವಿಗಳು.
ಯುವತಿಯರು ನೀರು ಪಾಲು
ರಾಯಚೂರು ತಾಲೂಕಿನ ಜುಲಮಗೇರಾದ ಉಷಾ(17), ಮುನಿಯಾ(18) ಮೃತಪಟ್ಟ ದುರ್ದೈವಿಗಳು. ದುದ್ದಕೂರು ಗ್ರಾಮದಲ್ಲಿನ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದಾಗ ಕಾಲು ಜಾರಿ ಬಿದ್ದು, ನೀರಿನಲ್ಲಿ ಕೊಚ್ಚಿ ಹೋಗಿದ್ದರು ಎನ್ನಲಾಗಿದೆ. ಸ್ಥಳದಲ್ಲಿ ಮಕ್ಕಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.