ಕರ್ನಾಟಕ

karnataka

ETV Bharat / state

ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟ: ಅದೃಷ್ಟವಶಾತ್​ ವೃದ್ಧೆ ಬಚಾವ್​​

ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಅವಘಡದಲ್ಲಿ ಅದೃಷ್ಟವಶಾತ್ ವೃದ್ಧೆ ಬಚಾವ್ ಆಗಿದ್ದಾರೆ.

ಎರಡು ಸಿಲಿಂಡರ್ ಸ್ಫೋಟ

By

Published : Nov 19, 2019, 11:42 PM IST

Updated : Nov 19, 2019, 11:53 PM IST

ರಾಯಚೂರು:ಜಿಲ್ಲೆಯ ಮಸ್ಕಿ ತಾಲೂಕಿನ ಕಣೂರು ಗ್ರಾಮದ ಮನೆಯೊಂದರಲ್ಲಿ ಎರಡು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಯ ವಸ್ತುಗಳೆಲ್ಲಾ ಬೆಂಕಿಗಾಹುತಿಯಾಗಿವೆ.

ಚಿದಾನಂದ ಸಿಂಗ್ ಎನ್ನುವರ ಮನೆಯಲ್ಲಿ ಈ ಘಟನೆ ಜರುಗಿದೆ. ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಮನೆಯಲ್ಲಿ ವಿದ್ಯುತ್ ಶಾರ್ಟ್​​ ಸರ್ಕ್ಯೂಟ್ ಸಂಭವಿಸಿ ಆರಂಭದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಅಡುಗೆ ಮನೆಯಲ್ಲಿದ್ದ ಎರಡು ಗ್ಯಾಸ್ ಸಿಲಿಂಡರ್ ಕೂಡ ಸ್ಫೋಟಗೊಂಡಿವೆ.

ಎರಡು ಸಿಲಿಂಡರ್ ಸ್ಫೋಟ

ಈ ವೇಳೆ ಮನೆಯಲ್ಲಿದ್ದ ವೃದ್ಧೆಯನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಅಲ್ಲದೇ ಗ್ರಾಮಸ್ಥರು ಆತಂಕಗೊಂಡು ಹೊರಗಿನ ಹಳ್ಳದ ಕಡೆ ಓಡಿ ಹೋಗಿದ್ದಾರೆ. ಸ್ಫೋಟದಿಂದ ಬಾಂಬ್ ಬ್ಲಾಸ್ಟ್ ಆಗುವ ರೀತಿಯಲ್ಲಿ ಬಾರಿ ಶಬ್ದ ಕೇಳಿ ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ತುರವಿಹಾಳ ಪೊಲೀಸ್​​ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Last Updated : Nov 19, 2019, 11:53 PM IST

ABOUT THE AUTHOR

...view details